ವಿಟ್ಲ ಚೋಯ್ಸ್ ಗೋಲ್ಡ್ ನ 6ನೇ ವರ್ಷಾಚರಣೆ ಮತ್ತು ಬ್ರೈಡಲ್ ಫೆಸ್ಟ್-2023 ಕಾರ್ಯಕ್ರಮ
ವಿಟ್ಲ: ವಿಟ್ಲ ಚೋಯ್ಸ್ ಗೋಲ್ಡ್ ನ 6ನೇ ವರ್ಷಾಚರಣೆ ಮತ್ತು ಬ್ರೈಡಲ್ ಫೆಸ್ಟ್-2023 ಕಾರ್ಯಕ್ರಮ ನಡೆಯಿತು.
ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಮತ್ತು ಅಲ್ ಹಾಜಿ ಬಿ.ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರು ದುವಾಃ ಮೂಲಕ ಚಾಲನೆ ನೀಡಿದರು.
ಬಂಬ್ರಾಣ ಉಸ್ತಾದ್ ಮಾತನಾಡಿ ವ್ಯಾಪಾರದಲ್ಲಿ ಪ್ರಮಾಣಿಕತೆ ಮತ್ತು ಪಾರದರ್ಶಕತೆ ಕೂಡಿದಾಗ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ದೇವರು ಅವರ ವ್ಯಾಪಾರವನ್ನು ಮೆಚ್ಚುತ್ತಾನೆ. ವ್ಯಾಪಾರದಲ್ಲಿ ನೆಮ್ಮದಿ ಸಿಗಬೇಕಾದರೆ ಪ್ರಮಾಣಿಕತೆ ಅಗತ್ಯವಾಗಿದೆ ಎಂದರು.
ಮಾಣಿ ಉಸ್ತಾದ್ ಮಾತನಾಡಿ ಉದ್ಯಮದಲ್ಲಿ ದೇವರು ಯಶಸ್ವಿ ಕರಣಿಸಲಿ ಎಂದು ಶುಭ ಹಾರೈಸಿದರು.
ಚೋಯ್ಸ್ ಗೋಲ್ಡ್ ನ ಮಾಲಕರಾದ ಅಶ್ರಪ್ ನಾಡಾಜೆ, ಸಹೀರ್ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಅಬ್ಬಾಸ್ ಮದನಿ, ಗಫೂರ್ ಉಸ್ತಾದ್, ಸಿ.ಎಚ್ ಇಬ್ರಾಹೀಂ ಮುಸ್ಲಿಯಾರ್, ಕೆ.ಎ ಹಸೈನಾರ್ ಮುಸ್ಲಿಯಾರ್, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶಾಕೀರ್ ಅಳಕೆಮಜಲು, ವಿಕೆಎಂ ಅಶ್ರಫ್, ಅಬೂಬಕ್ಕರ್ ಅನಿಲಕಟ್ಟೆ, ಕಲಂದರ್ ಪರ್ತಿಪ್ಪಾಡಿ, ರಶೀದ್ ಉಕ್ಕುಡ, ಮಾಲಕರಾದ ಅಶ್ರಪ್ ನಾಡಾಜೆ, ಸಹೀರ್ ಮೊದಲಾದವರು ಉಪಸ್ಥಿತರಿದ್ದರು.





