ಕಾಸರಗೋಡು: ಮಾದಕ ವಸ್ತು ಸಾಗಾಟ ಪ್ರಕರಣ – ಮಂಜೇಶ್ವರ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ
ಕಾಸರಗೋಡು: ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕೂಳೂರಿ ನ ಮುಹಮ್ಮದ್ ನೌಫಾಲ್ (33) ಮತ್ತು ತಲಪಾಡಿ ನೇರ್ಲಪ್ಪಾಡಿ ಯ ಕೆ. ಬಿ ಫೈಝಲ್ (26) ಬಂಧಿತರು.
ಇವರು ಎಂಡಿಎಂಎ ಮಾದಕ ವಸ್ತು ಸಾಗಾಟದ ಏಜೆಂಟ್ ಗಳೆಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಂಜೇಶ್ವರ ಪೊಲೀಸರು ಮೂವರನ್ನು ಎಂ ಡಿ ಎಂ ಎ ಮಾದಕ ವಸ್ತು ಸಹಿತ ಪೊಲೀಸರು ಬಂಧಿಸಿದ್ದರು. ಇವರಿಗೆ ಈ ಇಬ್ಬರು ಮಾದಕ ವಸ್ತು ತಲ ಪಿಸಿದ್ದರು. ಬಂಧಿತ ಮೂವರು ನೀಡಿದ ಸುಳಿವು ಆಧಾರಿಸಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಏಜೆಂಟರ್ ಗಳನ್ನು ಬಂಧಿಸಿದ್ದಾರೆ.




