March 20, 2026

ಉಡುಪಿ: ಬಾಲಕಿಗೆ ಕರಾಟೆ ತರಗತಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ, ದಂಡ

0
IMG-20230204-WA0018.jpg

ಉಡುಪಿ: ಕರಾಟೆ ತರಗತಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು 10ವರ್ಷ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾ ಸಜೆ ವಿಧಿಸಿ ಆದೇಶಿಸಿದೆ.

ಆರೋಪಿಯನ್ನು ಪಡುಬಿದ್ರೆ ಉಮೇಶ್ ಬಂಗೇರ(45) ಎಂದು ಗುರುತಿಸಲಾಗಿದೆ.

ಉಮೇಶ್ ಬಂಗೇರ ಪಡುಬಿದ್ರೆಯಲ್ಲಿ ಕರಾಟೆ ತರಗತಿ ನಡೆಸುತ್ತಿದ್ದು, 2020ರ ಫೆ.12ರಂದು ಕರಾಟೆ ತರಗತಿಗೆ ಬಂದಿದ್ದ ಬಾಲಕಿ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದನು.

ಇನ್ನು 2020ರ ಸೆ.27ರಂದು ಬಾಲಕಿಯ ತಾಯಿಗೆ ಕರೆ ಮಾಡಿದ ಆರೋಪಿಯು ಈ ದಿನ ತರಗತಿ ಇದ್ದು, ಬಾಲಕಿಯನ್ನು ಕಳುಹಿಸಿಕೊಂಡುವಂತೆ ಕೋರಿ ಕೊಂಡಿದ್ದನು. ಅದರಂತೆ ಬಾಲಕಿಯ ತಾಯಿ ತರಗತಿಗೆ ಹೋಗುವಂತೆ ಬಾಲಕಿಗೆ ತಿಳಿಸಿದ್ದರು. ಆದರೆ ಬಾಲಕಿ ತರಗತಿಗೆ ಹೋಗಲು ಒಪ್ಪದೆ ಅಳುತ್ತಿದ್ದಳು. ಆಗ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ತಾಯಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದೀಗ ಆರೋಪಿಗೆ ಪೊಕ್ಸೋ ಕಾಯಿದೆಯಡಿ 10ವರ್ಷ ಜೈಲುಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾ ಸಜೆ, ನೀಡಿ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!