February 1, 2026

ಜಾಮಿಯ ಮಿಲ್ಲಿಯಾ ಹಿಂಸಾಚಾರ ಪ್ರಕರಣ: ಶರ್ಜೀಲ್ ಇಮಾಮ್ ಮತ್ತು ಆಸಿಫ್ ಇಕ್ಬಾಲ್ ಖುಲಾಸೆ

0
sharjeel_imam_discharged_in_jamia_violence_case_1675490890915_1675490891141_1675490891141.jpg

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೆಹಲಿ ಪೊಲೀಸರು ಮತ್ತು ಜನರ ನಡುವಿನ ಜಾಮಿಯ ಮಿಲಿಯಾ ಇಸ್ಲಾಮೀಯ ಕ್ಯಾಂಪಸ್ ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿದ್ಯಾರ್ಥಿ ಶರ್ಜೀಲ್ ಇಮಾಮ್ ಮತ್ತು ವಿದ್ಯಾರ್ಥಿ ಕಾರ್ಯಕರ್ತ ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ದೆಹಲಿ ನ್ಯಾಯಾಲಯವು ಶನಿವಾರ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ.

ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರುಲ್ ವರ್ಮಾ ಈ ಆದೇಶವನ್ನು ಪ್ರಕಟಿಸಿದರು.

ಈ ಪ್ರಕರಣದಲ್ಲಿ ಶಾರ್ಜೀಲ್ ಇಮಾಮ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಇಬ್ಬರಿಗೂ ಈ ಹಿಂದೆ ಜಾಮೀನು ನೀಡಲಾಗಿತ್ತು. ಆದಾಗ್ಯೂ, ಫೆಬ್ರವರಿ 2020 ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಪಿತೂರಿ ಪ್ರಕರಣದಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ ಅಥವಾ ಯುಎಪಿಎ ಅಡಿಯಲ್ಲಿ ಶರ್ಜೀಲ್ ರನ್ನು ಬಂಧಿಸಲಾಯಿತು.

Leave a Reply

Your email address will not be published. Required fields are marked *

error: Content is protected !!