August 12, 2026

ಪಾಟ್ನಾ ಬದಲಿಗೆ ಪ್ರಯಾಣಿಕನನ್ನು ರಾಜಸ್ಥಾನಕ್ಕೆ ಕರೆದೊಯ್ದ ಇಂಡಿಗೋ ವಿಮಾನ

0
ec4fnt5o_indigo-a320neo-ndtv_625x300_17_April_19.jpg

ನವದೆಹಲಿ: ಕೆಲವೊಮ್ಮೆ ಬಸ್ ನಿಲ್ದಾಣದಲ್ಲಿ ತಪ್ಪಿ ಬೇರೆ ಬಸ್ ನಲ್ಲಿ ಜನರು ಪ್ರಯಾಣಿಸುತ್ತಾರೆ. ಆದರೆ ಇದೇ ಘಟನೆ ವಿಮಾನದಲ್ಲಿ ನಡೆದಿದೆ. ಇಂಡಿಗೋ ವಿಮಾನದಲ್ಲಿ ಈ ರೀತಿಯ ಪ್ರಕರಣ ವರದಿಯಾಗಿದೆ.

ಜನವರಿ 30ರಂದು ಅಪ್ಸರ್ ಹುಸೇನ್ ಎಂಬವರು ಪಾಟ್ನಕ್ಕೆ ತೆರಳಲು ಇಂಡಿಗೋ ವಿಮಾನದ ಟಿಕೇಟ್ ಬುಕ್ ಮಾಡಿದ್ದರು. ದೆಹಲಿಯಿಂದ ಪಾಟ್ನಕ್ಕೆ ಪ್ರಯಾಣ ಮಾಡಬೇಕಿತ್ತು. ವಿಮಾನ ನಿಲ್ದಾಣ ತಲುಪಿದ ಬಳಿಕ ಅವರನ್ನು ಇಂಡಿಗೋ ಸಿಬ್ಬಂದಿ ಟಿಕೇಟ್ ಚೆಕ್ ಮಾಡಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು. ಆದರೆ ಅದು ಪಾಟ್ನಕ್ಕೆ ತೆರಳುತ್ತಿದ್ದ ವಿಮಾನವಾಗಿರಲಿಲ್ಲ. ಬದಲಾಗಿ ರಾಜಸ್ತಾನದ ಉದಯಪುರಕ್ಕೆ.

ರಾಜಸ್ತಾನದ ಉದಯಪುರದಲ್ಲಿ ಇಳಿದ ಬಳಿಕ ಅಪ್ಸರ್ ಹುಸೇನ್ ಗೆ ಶಾಕ್ ಆಯಿತು. ವಿಮಾನ ನಿಲ್ದಾಣದ ಸಿಬ್ಬಂದಿ ಮರಳಿ ಅವರನ್ನು ದೆಹಲಿಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಜನವರಿ 31ರಂದು ಅಪ್ಸರ್ ಹುಸೇನ್ ಪಾಟ್ನಕ್ಕೆ ಪ್ರಯಾಣ ಬೆಳೆಸಿದರು. ಇದೀಗ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆಗೆ ನಾಗರಿಕ ವಿಮಾನ ಯಾನ ನಿರ್ದೇಶನಾಲಯ ಆದೇಶ ನೀಡಿದೆ

Leave a Reply

Your email address will not be published. Required fields are marked *

You may have missed

error: Content is protected !!