ನ್ಯೂಝಿಲೆಂಡ್ vs ಭಾರತ T-20 ಟೂರ್ನಿ:
ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ
ಜೈಪುರ: ಇಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ಮತ್ತು ಭಾರತ ತಂಡದ 20-20 ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಜಯ ಸಾದಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಝಿಲೆಂಡ್ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ಗಳಿಸಿತು. ಮಾರ್ಟಿನ್ ಗುಪ್ಟಿಲ್ ಮತ್ತು ಚಾಪ್ಮಾನ್ ರವರ ಆಕರ್ಷಕ ಅರ್ಧಶತಕದ ನೆರವಿನಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ನ್ಯೂಝಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ 70(42), ಡಾರ್ಲಿ ಮಿಷೆಲ್ 0(1), ಚಾಪ್ಮಾನ್ 63(50), ಗ್ಲೆನ್ ಫಿಲಿಪ್ಸ್ 0(3), ಸೀಫರ್ಟ್ 12(11), ರಚಿನ್ ರವೀಂದ್ರ 7(8), ಸಾಂಟ್ನರ್ 4*(4), ಟಿಮ್ ಸೌತಿ 0*(1) ರನ್ ಗಳಿಸಿದರು.
ನ್ಯೂಝಿಲೆಂಡ್ ನೀಡಿದ ಗುರಿಯನ್ನು ಭಾರತ ತಂಡವು 19.4 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವುದರ ಮೂಲಕ 5 ವಿಕೆಟ್ ಗಳ ಜಯವನ್ನು ಸಾಧಿಸಿತು. ಆರಂಭಿಕ ಆಟಗಾರ ಕೆ. ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ 50 ರನ್ ಗಳ ಜೊತೆಯಾಟದಲ್ಲಿ ಉತ್ತಮ ಇನ್ನಿಂಗ್ಸ್ ಆರಂಬಿಸಿದರು, ಕೆ. ಎಲ್ ರಾಹುಲ್ ಕಡಿಮೆ ರನ್ ಗಳಿಸಿ ಔಟಾದರು, ಎರಡನೇ ಕ್ರಮಾರ್ದದಲ್ಲಿ ಬಂದ ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಜೊತೆಯಾಟದಲ್ಲಿ 59 ರನ್ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು.
ಭಾರತ ತಂಡದ ಕೆ ಎಲ್ ರಾಹುಲ್ 15(14), ರೋಹಿತ್ ಶರ್ಮಾ14(14), ಸೂರ್ಯಕುಮಾರ್ ಯಾದವ್ 62(40), ರಿಷಭ್ ಪಂತ್ 17*(17), ಶ್ರೇಯಸ್ ಅಯ್ಯರ್ 5(8), ವೆಂಕಟೇಶ್ ಅಯ್ಯರ್ 4 (2), ಅಕ್ಷರ್ ಪಟೇಲ್ 1*(1) ರನ್ ಗಳಿಸಿದರು.
ಭಾರತ ಪರ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಭುವನೇಶ್ವರ್ ಕುಮಾರ್ 2, ರವಿಚಂದ್ರನ್ ಅಶ್ವಿನ್ 2, ದೀಪಕ್ ಚಾಹರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.





