September 20, 2024

ಮಾಣಿ ಅಪಘಾತ ಪ್ರಕರಣ:
ಗಲಾಟೆ ಬಿಡಿಸಲು ಪ್ರಯತ್ನಿಸಿದ್ಧ SSF ಕಾರ್ಯಕರ್ತನ ಮೇಲೆಯೇ ಪೋಲಿಸರ ಕ್ರಮ ಖಂಡನೀಯ; ಎಸ್.ಡಿ.ಪಿ.ಐ

0

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಾಣಿ ಸಮೀಪದ ಸತ್ತಿಕಲ್ಲು ಎಂಬಲ್ಲಿ ಎರಡು ದಿನಗಳ ಹಿಂದೆ ಇನ್ನೋವಾ ಕಾರು ಮತ್ತು ಸ್ವಿಫ್ಟ್ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆಯಲ್ಲಿ ಇನ್ನೋವಾ ಕಾರಿನಲ್ಲಿದ್ದ ಮುಸ್ಲಿಂ ಯುವಕನ ಮೇಲೆ ಸಂಘಪರಿವಾರದ ಕಿಡಿಗೇಡಿಗಳು ಪೋಲಿಸರ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು,ಇದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗಲಾಟೆ ಯಾಗುವ ಸಂದರ್ಭದಲ್ಲಿ ಸ್ಥಳೀಯ SSF ಸಂಘಟನೆಯ ಸಕ್ರಿಯ ಕಾರ್ಯಕರ್ತ ಹನೀಫ್ ಸಂಕ ಎಂಬವರು ಎರಡು ಕಡೆಯವರನ್ನು ಸಮಾಧಾನ ಪಡಿಸಿ ಗಲಾಟೆ ನಿಲ್ಲಿಸಿ ಶಾಂತಿಯಾಗಿಸಲು ಪ್ರಯತ್ನಪಟ್ಟಿದ್ದರು, ಇದು ವೈರಲ್ ಆದ ವೀಡಿಯೋದಲ್ಲಿ ಕೂಡ ಸ್ಪಷ್ಟವಾಗಿ ಗೋಚರಿಸುತ್ತದೆ.

ಆದರೆ ಘಟನೆ ನಡೆದು ಎರಡು ದಿನಗಳಾದರು ಪೋಲಿಸರು ನೈಜ ಆರೋಪಿಗಳು ರಾಜಾರೋಶವಾಗಿ ತಿರುಗಾಡುತ್ತಿದ್ದರು ಅವರನ್ನು ಬಂದಿಸದೆ ಗಲಭೆಯನ್ನು ನಿಯಂತ್ರಿಸಲು ಶ್ರಮಿಸಿದ್ದ ನಿರಪರಾಧಿ SSF ಕಾರ್ಯಕರ್ತನ ಮೇಲೆಯೆ ಸ್ವಯಂ ಪ್ರೇರಿತ ಕೇಸ್ ದಾಖಲು ಮಾಡಿ ಮಸೀದಿಯಿಂದ ಬರುವಾಗ ಬಂಧಿಸಿರುವ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಲ್ಲಡ್ಕ ಬ್ಲಾಕ್ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ ತೀವ್ರವಾಗಿ ಖಂಡಿಸಿದ್ದಾರೆ.

ಅಮಾಯಕ ನಿರಪರಾದಿ SSF ಕಾರ್ಯಕರ್ತನನ್ನು ಕೂಡಲೇ ಬಿಡುಗಡೆಗೊಳಿಸಿ, ವೀಡಿಯೋ ಸಾಕ್ಷಿ ಸಹಿತ ಇರುವ ನೈಜ ಆರೋಪಿಗಳಾದ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಬೇಕೆಂದು ಸತ್ತಾರ್ ಕಲ್ಲಡ್ಕ ರವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!