ಕಾರ್ಕಳ: ಲಾರಿ ಚಾಲಕರ ನಡುವೆ ಗಲಾಟೆ ಓರ್ವ ಚಾಲಕನ ಕೊಲೆಯಲ್ಲಿ ಅಂತ್ಯ
ಕಾರ್ಕಳ: ಲಾರಿ ಚಾಲಕರ ನಡುವೆ ಪ್ರಾರಂಭವಾದ ಗಲಾಟೆ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಘಟನೆ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿ ಎಂಬಲ್ಲಿ ಜನವರಿ 30ರಂದು ರಾತ್ರಿ ವೇಳೆ ನಡೆದಿರುವುದಾಗಿ ವರದಿಯಾಗಿದೆ.
ತಮಿಳುನಾಡಿನ ಲಾರಿ ಚಾಲಕ ಚಾಲಕ ಮಣಿ (36) ಎಂಬವರು ಕೊಲೆಯಾಗಿದ್ದು, ಕೊಲೆ ಆರೋಪಿ ಇನ್ನೋರ್ವ ಲಾರಿ ಚಾಲಕ ವೀರಬಾಹು ಎಂದು ಗುರುತಿಸಲಾಗಿದೆ.
ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅದರಲ್ಲಿ ಬಂದವರು ಲಾರಿಯಲ್ಲಿ ಅನ್‌ಲೋಡ್ ಮಾಡಿ ಹೋಗುತ್ತಿದ್ದರು. ತಮಿಳುನಾಡಿನಿಂದ ಬಂದ ಎರಡು ಲಾರಿಗಳ ಸರಕು ಅನ್ ಲೋಡ್ ಆಗದ ಕಾರಣ ಲಾರಿಗಳು ಫ್ಯಾಕ್ಟರಿ ಬಳಿಯೇ ನಿಂತಿತ್ತು.
ಈ ನಡುವೆ ರಾತ್ರಿ 8:30ರ ಸುಮಾರಿಗೆ ಲಾರಿ ಚಾಲಕರುಗಳಾದ ವೀರಬಾಹು ಹಾಗೂ ಮಣಿ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಹಂತಕ್ಕೆ ಹೋಗಿತ್ತು, ಈ ವೇಳೆ ವೀರಬಾಹು, ಮಣಿಯ ಕುತ್ತಿಗೆಗೆ ಶಾಲ್ ನಿಂದ ಬಿಗಿದು ಆಯುಧದಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.