August 13, 2026

ಭದ್ರಾವತಿ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ

0
image_editor_output_image823468720-1675078239666.jpg

ಶಿವಮೊಗ್ಗ: ನಡು ರಸ್ತೆಯಲ್ಲೇ ಕಾರೊಂದು ಹೊತ್ತಿ ಉರಿದ ಘಟನೆ ಶಿವಮೊಗ್ಗದ ಭದ್ರಾವತಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಭದ್ರಾವತಿ ಉಜ್ಜನೀಪುರದ ಹೊಳೆ ಬ್ರಿಡ್ಜ್ ಸಮೀಪ ರಸ್ತೆಯಲ್ಲಿ ಕಾರು ಹೊತ್ತಿರ ಉರಿದಿದೆ. ಭದ್ರಾವತಿಯ ಓಲ್ಡ್ ಟೌನ್ ನಿವಾಸಿ ಶ್ರೀಕಾಂತ್ ಎಂಬುದವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ.

ಕಾರು ಚಲಾಯಿಸುವಾಗ ಕಾರು ಮುಂಭಾಗದಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದು,ಚಾಲಕ ಶ್ರೀಕಾಂತ್ ತಕ್ಷಣವೇ ಕಾರಿನಿಂದ ಇಳಿದು, ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಶಾಮಕ ಅಧಿಕಾರಿಗಳು – ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಕಾರಿನ ಮುಂಭಾಗದಲ್ಲಿ ಸಂಪೂರ್ಣ ಸುಟ್ಟು ಹೋಗಿದೆ.

Leave a Reply

Your email address will not be published. Required fields are marked *

You may have missed

error: Content is protected !!