ಕಾರ್ಕಳ: ರಸ್ತೆಯ ಮಧ್ಯೆ ಹೊಡೆದಾಡಿಕೊಂಡ ಖಾಸಗಿ ಬಸ್ ಕಂಡಕ್ಟರ್: ಕೆಎಸ್ಆರ್‌ಟಿಸಿ ಬಸ್ ಚಾಲಕ
ಕಾರ್ಕಳ: ಖಾಸಗಿ ಬಸ್ ಕಂಡಕ್ಟರ್‌ಗೆ ಕೆಎಸ್ಆರ್‌ಟಿಸಿ ಬಸ್ ಚಾಲಕ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ರಸ್ತೆಯ ಮಧ್ಯೆ ಗಲಾಟೆ ನಡೆದಿರುವ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ.
ಉಡುಪಿ ಕಾರ್ಕಳ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಬಸ್ ಗೆ ಸೈಡ್ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ.
ಇನ್ನು ಸರಕಾರಿ ಬಸ್ ಚಾಲಕನಿಗೆ ಅವಾಚ್ಯವಾಗಿ ಖಾಸಗಿ ಬಸ್ ಕಂಡಕ್ಟರ್ ನಿಂದಿಸಿದ್ದು, ಇದರಿಂದ ಕೋಪಗೊಂಡು ಕಂಡಕ್ಟರ್ ಮೇಲೆ ಬಸ್ ಚಾಲಕ ಸೈಯದ್ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಕೆಎಸ್ಆರ್‌ಟಿಸಿ ಚಾಲಕನ ಮೇಲೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.




