ಮಂಜೇಶ್ವರ: ಭೀಕರ ಕಾರು ಅಪಘಾತ: ಒಬ್ಬ ಸ್ಥಳದಲ್ಲೇ ಮೃತ್ಯು: ಇಬ್ಬರ ಸ್ಥಿತಿ ಚಿಂತಾಜನಕ
ಮಂಜೇಶ್ವರದ ಗಡಿ ಪ್ರದೇಶಕ್ಕೆ ಸಮೀಪದ ಕೊಲ್ಯ ಎಂಬಲ್ಲಿ ಭಾನುವಾರದಂದು ರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿ ಇತರ ಮೂವರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿರುವುದಾಗಿ ಮಾಹಿತಿ ಲಭಿಸಿದೆ.
ರಾಷ್ಟ್ರೀಯ ಹೆದ್ದಾರಿ 66 ಕೊಲ್ಯದ ವಿಭಜಗಕ್ಕೆ ಕಾರು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಕುಂಜತ್ತೂರು ನಿವಾಸಿ ಸಯ್ಯದ್ ಎಂಬವರ ಪುತ್ರ ಆಹ್ಮದ್ ರಿಫಾಯಿ ಸಯ್ಯದ್ (24) ಮೃತ ದುರ್ದೈವಿ. ಜೊತೆಯಾಗಿದ್ದ ಈತನ ಸಂಬಂಧಿಕ ಉಪ್ಪಳ ನಿವಾಸಿ ಬಶ್ರ (22) ನನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಪ್ರಯಾಣಿಕರು ಕೂಡಾ ಗಾಯಗೊಂಡಿದ್ದಾರೆ.





