August 13, 2026

ಬೆಳ್ತಂಗಡಿ: ಜಾನುವಾರು ತಿವಿದು ಗಾಯಗೊಂಡಿದ್ದ ಮಹಿಳೆ ಸಾವು

0
IMG-20230129-WA0011.jpg

ಬೆಳ್ತಂಗಡಿ: ದನ ತಿವಿದು ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗುಂಡೂರಿ ಗ್ರಾಮದ ದರಿಕಂಡ ನಿವಾಸಿ ಸದಾನಂದ ಪೂಜಾರಿ ಅವರ ಪತ್ನಿ ಮೋಹಿನಿ ಯಾನೆ ಪ್ರೇಮ (45) ಮೃತಪಟ್ಟಿದ್ದಾರೆ.

ಹಟ್ಟಿಯಲ್ಲಿ ಮೇವು ಹಾಕುತ್ತಿದ್ದಾಗ ಅನಿರೀಕ್ಷಿತವಾಗಿ ದನ ತಿವಿದು ಮೋಹಿನಿ ಕುತ್ತಿಗೆಯ ಭಾಗಕ್ಕೆ ದನದ ಕೊಂಬು ತಾಗಿ ತೀವ್ರ ತರಹದ ಗಾಯವಾಗಿತ್ತು.

ಇನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೋಹಿನಿ ಅವರ ಪುತ್ರಿಗೆ ಕೆಲವು ದಿನಗಳ ಹಿಂದೆಯಷ್ಟೇ ಹೆರಿಗೆಯಾಗಿದ್ದು, ಮೃತರು ಪತಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!