ಕಾರ್ಕಳ: ಗಾಂಧಿ ಮೈದಾನದಲ್ಲಿ ಕಾಣಿಸಿಕೊಂಡ ಸುಳಿಗಾಳಿ: ಕೆಲ ನಿಮಿಷಗಳ ಕಾಲ ಭಯಭೀತಗೊಂಡ ಜನ
ಉಡುಪಿ: ಉಡುಪಿಯ ಕಾರ್ಕಳ ಗಾಂಧಿ ಮೈದಾನದಲ್ಲಿ ಸುಳಿಗಾಳಿ ಕಾಣಿಸಿಕೊಂಡಿದ್ದು, ಈ ಪ್ರಾಕೃತಿಕ ವಿದ್ಯಮಾನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಗಾಳಿಯು ಕಾಣಿಸಿಕೊಂಡಿದ್ದು, ಸುರಳಿ ಆಕಾರದಲ್ಲಿ ಧೂಳು, ಮುಗಿಲೆತ್ತರಕ್ಕೆ ಚಿಮ್ಮಲು ಪ್ರಾರಂಭಿಸಿತು. ಈ ವೇಳೆ ದೂಳಿನ ಜೊತೆಗೆ ಮೈದಾನದಲ್ಲಿದ್ದ ಕಸ ಗಿಡಗಂಟಿಗಳನೆಲ್ಲ ಹೊತ್ತು ಮೇಲಿರಿತು. ಕೆಲ ನಿಮಿಷಗಳ ಕಾಲ ಅತ್ಯಂತ ಕುತೂಹಲದಿಂದ ಜನರು ಈ ವಿದ್ಯಮಾನವನ್ನು ವೀಕ್ಷಿಸಿದರು.




