February 4, 2026

ಉರುಳಿ ಬಿದ್ದ ಕಾಮಗಾರಿ ನಡೆಯುತ್ತಿದ್ದ ಕಟ್ಟಡ: ರಸ್ತೆ ಬದಿಯಲ್ಲಿದ್ದ ಮಹಿಳೆ ಸಾವು

0
image_editor_output_image19160726-1674882918208.jpg

ಚೆನ್ನೈ: ಕಟ್ಟಡ ಉರುಳಿ ಬಿದ್ದ ಪರಿಣಾಮ ಮಹಿಳಾ ಟೆಕ್ಕಿ ಯೊಬ್ಬರು ದುರ್ಮರಣಕ್ಕೀಡಾದ ಘಟನೆ ಚೆನ್ನೈನ ಥೌಸಂಡ್ ಲೈಟ್ಸ್ ಪ್ರದೇಶದಲ್ಲಿ ನಡೆದಿದೆ.

ಮೃತಳನ್ನು ಪದ್ಮ ಪ್ರಿಯಾ (22) ಎಂದು ಗುರುತಿಸಲಾಗಿದೆ. ಮಧುರೈ ನಿವಾಸಿಯಾಗಿರುವ ಈಕೆ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಪದ್ಮಪ್ರಿಯ ಅವರು ತನ್ನ ಗೆಳತಿಯ ಜೊತೆಗೆ ಮೆಟ್ರೋ ಸ್ಟೇಷನ್ ಕಡೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಕಟ್ಟಡ ಏಕಾಏಕಿ ಇವರ ಮೇಲೆ ಬಿದ್ದಿದೆ.

ಕೂಡಲೇ ಸ್ಥಳೀಯರು ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೆ ಅಂಬುಲೆನ್ಸ್ ಗೂ ಕರೆ ಮಾಡಿದ್ದಾರೆ.

ಇತ್ತ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.

ನಂತರ ಕಟ್ಟಡದ ಅವಶೇಷಗಳಡಿಯಿಂದ ಹೊರತೆಗೆದು ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಅದಾಗಲೇ ಪದ್ಮ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!