February 4, 2026

ವಿಟ್ಲ: ಜ.28ರಂದು ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ನೂತನ ಕಟ್ಟಡ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ

0
IMG-20230127-WA0021.jpg

ವಿಟ್ಲ : ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟು, ವಿಟ್ಲ ಇಲ್ಲಿನ ನೂತನ ಕಟ್ಟಡದ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ‘NABHA 2023’ ಜ.28 ರಂದು ಸಂಜೆ 5 ಕ್ಕೆ ನಡೆಯಲಿದೆ.

ಹಾಜಿ ಕೆ. ಅಂದುಂಞಿ ಕಟ್ಟಡವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಭೀಫಾತಿಮಾ ಕಟ್ಟಡವನ್ನು ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಒಳ ಕ್ರೀಡಾಂಗಣವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರಣ್ಯ ಪರಿಸರ ಮತ್ತು ಪರಿಸರ ಮಾಜಿ ಸಚಿವ ಬಿ.ರಮಾನಾಥ ರೈ, ಕರ್ನಾಟಕ ನಗರಾಭಿವೃದ್ಧಿ ಮಾಜಿ ಸಚಿವ ವಿನಯ ಕುಮಾರ್‍ ಸೊರಕೆ, ಜನಪ್ರಿಯ ಫೌಂಡೇಶನ್ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸುಧಾಕರ್‍ ಕೆ., ಬಂಟ್ವಾಳ ಬ್ಲಾಕ್ ಶಿಕ್ಷಣಾಧಿಕಾರಿ ಜ್ಞಾನೇಶ ಎಂ.ಪಿ, ವಿಠ್ಠಲ್ ಜೇಸಿಸ್ ಎಜುಕೇಶನಲ್ ಸೊಸೈಟಿನ ಅಧ್ಯಕ್ಷ ಎಲ್.ಎನ್ ಕೂಡೂರು, ಸೈಂಟ್ ರೀಟಾ ಪ್ರೌಢಶಾಲಾ ಪ್ರಾಂಶುಪಾಲ ಫಾ| ಸುನಿಲ್ ಪ್ರವೀಣ್ ಪಿಂಟೋ, ವಿಟ್ಲ ಮುಡ್ನೂರು ಗ್ರಾ.ಪಂ.ಅಧ್ಯಕ್ಷ ಜಯಪ್ರಕಾಶ್ ನಾಯಕ್ ಎನ್, ಹಾಸನ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಟಿ.ಬಿ ಅಬ್ದುಲ್ ರೆಹಮಾನ್ ಹಾಜಿ, ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮೊಹಮ್ಮದ್ ಕುಂಞಿ, ವಿಟ್ಲ ಮುಡ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್‍ ಹಾಜಿ ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಜನಪ್ರಿಯ ಪೌಂಡೇಶನ್‌ನ ಅಧ್ಯಕ್ಷೆ ಫಾತಿಮ ನಸ್ರೀನ್ ಬಶೀರ್‍, ಯುನೈಟೆಡ್ ನೇಷನ್ಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಡಾ. ರವಿ ಕುಮಾರ್‍ ಎಲ್.ಪಿ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಕೀರ್ ಅಳಕೆಮಜಲು ಭಾಗವಹಿಸಲಿದ್ದಾರೆ ಎಂದು ಆಡಳಿತಾಧಿಕಾರಿ ಸಫ್ವಾನ್ ಪಿಲಿಕಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!