ಮಂಗಳೂರು: ಎಂಡಿಎಂಎ ಮಾದಕ ವಸ್ತು ಸಾಗಾಟ: ಆರೋಪಿ ಪೊಲೀಸರ ವಶಕ್ಕೆ
ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂದರು ಜೆ.ಎಂ ರೋಡ್ ನ ತೂಸಿಮನ್ ಹೌಸ್ ನ ನಿವಾಸಿ ಇಕ್ಬಾಲ್ ಆಲಿ ಅಹಮ್ಮದ್ ಯಾನೆ ಇಕ್ಬಾಲ್ (38) ಎಂದು ಗುರುತಿಸಲಾಗಿದೆ.
ಆರೋಪಿ ಕುದ್ರೋಳಿಯ ಮೊಯಿದ್ದಿನ ನಗರದ ಬ್ಯಾಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ವೇಳೆ 11.13 ಗ್ರಾಂ ತೂಕದ 33,000 ರೂ. ಮೌಲ್ಯದ ಮಾದಕ ವಸ್ತು ಹಾಗೂ 5000 ರೂ ಮೌಲ್ಯದ ಮೊಬೈಲ್ ಪೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ




