February 3, 2026

ಮಂಗಳೂರು: ಬಂದರಿನ ಉದ್ಯಮಿಗೆ ದುಷ್ಕರ್ಮಿಗಳ ತಂಡದಿಂದ ಹಲ್ಲೆ, ಜೀವ ಬೆದರಿಕೆ

0
image_editor_output_image1916221896-1674501808182.jpg

ಮಂಗಳೂರು: ನಗರದ ಬಂದರಿನ ಉದ್ಯಮಿಯೊಬ್ಬರಿಗೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ಪಟಾಕಿ ಅಂಗಡಿ ಮಾಲಕರಿಗೆ ರವಿವಾರ ಸಂಜೆ ಕರೆ ಮಾಡಿದ ವ್ಯಕ್ತಿಯೊಬ್ಬ 5 ಲ.ರೂ. ಮೌಲ್ಯದ ಪಟಾಕಿ ಬೇಕೆಂದು, ಅದಕ್ಕಾಗಿ ನಗರದ ಖಾಸಗಿ ಹೊಟೇಲ್‌ಗೆ ಬರಬೇಕೆಂದು ಬೇಡಿಕೆಯಿಟ್ಟಿದ್ದ.

ಅಲ್ಲಿಗೆ ಬರಲಾಗದು ಎಂದಾಗ ಸೋಮವಾರ ಮಧ್ಯಾಹ್ನ ಉದ್ಯಮಿ ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ದಿನೇಶ್‌ ಶೆಟ್ಟಿ ಹಾಗೂ ಇತರ 4 ಮಂದಿ ಅಂಗಡಿಗೆ ನುಗ್ಗಿ 5 ಲ.ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಹಣ ನೀಡದಿದ್ದರೆ ಶೂಟ್‌ ಮಾಡಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಭೂಗತ ಲೋಕದ ಪಾತಕಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ ಎಂದು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!