February 4, 2026

ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 23 ಲಕ್ಷ ವಂಚನೆ: ಪರಾರಿಯಾಗಿದ್ದ ಆರೋಪಿ ಮಂಗಳೂರಲ್ಲಿ ಅರೆಸ್ಟ್

0
IMG-20230122-WA0014.jpg

ಮಂಗಳೂರು: ದೆಹಲಿಯ ಲೀಲಾ ಪ್ಯಾಲೆಸ್ ಹೋಟೆಲ್‌ನಲ್ಲಿ ತಂಗಿ ಸುಮಾರು 23 ಲಕ್ಷ ರೂ ಬಿಲ್ ವಂಚನೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿಯನ್ನು ಮಹಮದ್ ಷರೀಫ್ ಎಂದು ಗುರುತಿಸಲಾಗಿದೆ.

ಈತ ಯುಎಇಯ ರಾಜಮನೆತನದ ಕಚೇರಿ ಅಧಿಕಾರಿಯಂತೆ ನಟಿಸಿ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 23.46 ಲಕ್ಷ ವಂಚಿಸಿದ್ದು, ಇದೀಗ ಆತನನ್ನು ಮಂಗಳೂರಿನಲ್ಲಿ ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇನ್ನು ಹೋಟೆಲ್‌ಗೆ ನಂಬಿಸಲು ಮೊದಲಿಗೆ ಮಹಮ್ಮದ್ ಶರೀಫ್ 11.5 ಲಕ್ಷ ಹಣ ಪಾವತಿಸಿದ್ದು, ಬಾಕಿ 23 ಲಕ್ಷ ರೂ ಪಾವತಿಸದೇ ಪರಾರಿಯಾಗಿದ್ದ. ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಷರೀಫ್ ಬಂಧನಕ್ಕೆ ಬಲೆ ಬೀಸಿದ್ದು, ಇದೀಗ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!