ಮೋದಿ ಬಗೆಗಿನ ಬಿಬಿಸಿ ಡಾಕ್ಯುಂಟರಿಯನ್ನು ಡಿಲೀಟ್ ಮಾಡುವಂತರ ಯೂಟ್ಯೂಬ್- ಟ್ವಿಟರ್ ಗೆ ಕೇಂದ್ರ ಸರಕಾರ ಆದೇಶ
ಹೊಸದಿಲ್ಲಿ: ವಿವಾದ ಸೃಷ್ಟಿಸಿರುವ ಪ್ರಧಾನಿ ನರೇಂದ್ರ ಮೋದಿ ಬಗೆಗಿನ ಬಿಬಿಸಿ ಡಾಕ್ಯುಂಟರಿಯ ಎಲ್ಲಾ ಲಿಂಕ್ ಗಳನ್ನು ತೆಗೆದುಹಾಕಲು ಯೂಟ್ಯೂಬ್ ಮತ್ತು ಟ್ವಿಟರ್ ಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ವರದಿಯಾಗಿದೆ.
ಬಿಬಿಸಿ ವಾಹಿನಿಯು 2002ರ ಗುಜರಾತ್ ದಂಗೆಯ ಕುರಿತಾದ ಸಾಕ್ಷ್ಯಚಿತ್ರವನ್ನು ರಚಿಸಿದೆ. “ಇಂಡಿಯಾ: ದಿ ಮೋದಿ ಕ್ವಶ್ಚನ್” ಶೀರ್ಷಿಕೆಯ ಸಾಕ್ಷ್ಯಚಿತ್ರದ ಟ್ವೀಟ್‌ಗಳು ಮತ್ತು ಯೂಟ್ಯೂಬ್ ವೀಡಿಯೊಗಳು ಇನ್ನು ಮುಂದೆ ಮೈಕ್ರೋಬ್ಲಾಗಿಂಗ್ ಮತ್ತು ವೀಡಿಯೋ ಹಂಚಿಕೆ ವೆಬ್ ಸೈಟ್ ಗಳಲ್ಲಿ ಕಾಣಿಸುವುದಿಲ್ಲ.
50 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ತೆಗೆದುಹಾಕಲು ಸಚಿವಾಲಯ ಟ್ವಿಟರ್‌ಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿದೆ.


