ಸಾಲ್ಮರ ಅಸ್ವಾಲಿಹಾ ಮಹಿಳಾ ಶರೀಅತ್, ಪಿಯು ಕಾಲೇಜ್ ನಲ್ಲಿ ಮೀಲಾದ್ ಫೆಸ್ಟ್, “ಗ್ಲೋ-2k21” ಕಾರ್ಯಕ್ರಮ
ಪುತ್ತೂರು: ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ಮಹಿಳಾ ಶರೀಅತ್ & ಪಿ.ಯು. ಕಾಲೇಜ್ ನಲ್ಲಿ ಈದ್ ಮೀಲಾದ್ ಮತ್ತು ಕಾಲೇಜ್ ಡೆ ಪ್ರಯುಕ್ತ ಮೀಲಾದ್ ಫೆಸ್ಟ್ "ಗ್ಲೋ-2k21" ಕಾರ್ಯಕ್ರಮವು ಕಾಲೇಜ್ ಸಭಾಂಗಣದಲ್ಲಿ ಜರಗಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರು, ಅಸ್ವಾಲಿಹಾ ಮಹಿಳಾ ಕಾಲೇಜ್ ನಲ್ಲಿ ಶರೀಅತ್ ಮತ್ತು ಪಿ.ಯು.ಶಿಕ್ಷಣದ ಜೊತೆಗೆ ವಿವಿಧ ಪಠ್ಯೇತರ ವಿಷಯಗಳನ್ನು ನೀಡಲಾಗುತ್ತಿದ್ದು ,ವಿದ್ಯಾರ್ಥಿನಿಯರು ಕಲಿಕೆಯ ಜೊತೆಗೆ ಸಾಹಿತ್ಯ ಕಲಾ ಕ್ಷೇತ್ರಗಳಲ್ಲೂ ಸಾಕಷ್ಟು ಕೌಶಲ್ಯ ಪಡೆಯಲು ಇದರಿಂದ ಸಾಧ್ಯವಾಗುತ್ತದೆ, ಅದೇರೀತಿ ಇಲ್ಲಿ ಬಡ ,ನಿರ್ಗತಿಕ ವಿದ್ಯಾರ್ಥಿನಿಯರಿಗೆ ಕಾಲೇಜ್ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ, ಅರ್ಹರು ಇದರ ಸದಪಯೋಗ ಪಡೆಯಬೇಕು ಹೇಳಿದರು.
ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಮುಹಮ್ಮದ್ ಸಾಬ್ ಹಾಜಿ ಅವರು, ವಿದ್ಯಾರ್ಥಿನಿಯರು ಧರ್ಮದ ಬಗೆಗಿನ ಜ್ಞಾನವನ್ನು ಸಾಕಷ್ಟು ಕಲಿತುಕೊಂಡು ಮುಂದೆ ಅದನ್ನು ಜೀವನದಲ್ಲಿ ಪಾಲಿಸಿಕೊಂಡು ಇತರರಿಗೆ ಕಲಿಸಿ ಕೊಡುವಂತಾಗಬೇಕು, ಅದಕ್ಕಾಗಿ ಮೀಲಾದ್ ಫೆಸ್ಟ್ ಗಳಂತಹ ಸ್ಪರ್ಧಾತ್ಮಕ ಕಾರ್ಯಕ್ರಮ ಗಳ ಮೂಲಕ ವಿದ್ಯಾರ್ಥಿ ಜೀವನದಲ್ಲೇ ಪ್ರತಿಭಾ ಕೌಸಲ್ಯಗಳನ್ನು ಪಡೆದು ಕೊಳ್ಳಬೇಕೆಂದು ಹೇಳಿದರು. ಸಮಾರಂಭದಲ್ಲಿ ಕೋಡಿಂಬಾಡಿ ಜುಮ್ಮಾ ಮಸೀದಿಯಯ ಅಧ್ಯಕ್ಷ , ಉದ್ಯಮಿ ಉಮರ್ ಹಾಜಿ ಕೋಡಿಂಬಾಡಿ, ಉದ್ಯಮಿಗಳಾದ ಶಾಹುಲ್ ಹಮೀದ್ ಕುಕ್ಕಿಲ,ಝಕರಿಯಾ ಮಾಂತೂರು ಮೊದಲಾದವರು ಉಪಸ್ಥಿತರಿದ್ದರು.
ಉಸ್ತಾದ್ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಸ್ವಾಗತಿಸಿ ,ಮಹಿಳೆಯರಿಗೆ ಶರೀಅತ್ ಶಿಕ್ಷಣದ ಅಗತ್ಯತೆ ಬಗ್ಗೆ ವಿವರಿಸಿದರು. ಸಾಲ್ಮರ ಪ್ರೌಢಶಾಲಾ ಶಿಕ್ಷಕ ಅಬ್ದುಲ್ ರವೂಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿ ಕೊನೆಗೆ ಕೃತಜ್ಞತೆ ಸಲ್ಲಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಕಾಲೇಜ್ ನ ಒಳಾಂಗಣದಲ್ಲಿ ಕಾಲೇಜ್ ನ ಉಪನ್ಯಾಸಕಿಯರ ನೇತೃತ್ವದಲ್ಲಿ ವಿದ್ಯಾರ್ಥಿನಿಯರಿಂದ ವಿವಿಧ ಸ್ಪರ್ಧೆ “ಗ್ಲೋ-2k21” ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಸಮಗ್ರ ಚಾಂಪಿಯನ್ ,ವಯಕ್ತಿಕ ಚಾಂಪಿಯನ್ ,ಟ್ಯಾಲೆಂಟ್ -2k21 ,ಟಾಪ್ ಸ್ಕೊರರ್ ಮೊದಲಾದ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.





