August 13, 2026

ವಿಟ್ಲ: ಜಾತ್ರೆಯಲ್ಲಿ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಹಲ್ಲೆ: ತಡೆಯಲು ಬಂದ ಪತ್ನಿ ಮೇಲೆ ಮಾನಭಂಗಕ್ಕೆ ಯತ್ನ: ಆರು ಮಂದಿಯ ವಿರುದ್ದ ದೂರು ದಾಖಲು

0
IMG-20230119-WA0013.jpg

ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ಶ್ರೀ ಪಂಚಲಿಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಜಾತ್ರೆಯ ಸಂಧರ್ಭ ನಿಮಿತವಾಗಿ ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದ ಸುರೇಶ್‌ ದಾಸ್‌ ಎಂಬವರಿಗೆ ಆರು ಮಂದಿ ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಆರೋಪಿಗಳನ್ನು ಗಣೇಶ್‌ ಕಡಂಬು, ಮಂಜುನಾಥ ಮತ್ತು ಇತರ ನಾಲ್ಕು ಮಂದಿ ಎಂದು ಗುರುತಿಸಲಾಗಿದೆ.

ಸುರೇಶ್‌ ದಾಸ್‌ ಎಂಬವರು ದೇವಸ್ಥಾನದ ಅನುಮತಿಯಂತೆ ಫ್ಯಾನ್ಸಿ ಮಳಿಗೆ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು ರಾತ್ರಿ 12.30ಕ್ಕೆ ವ್ಯಾಪಾರ ಮುಗಿಸಿ ಮಳಿಗೆಯನ್ನು ಮುಚ್ಚುವ ಸಮಯದಲ್ಲಿ ಗಣೇಶ್‌ ಕಡಂಬು ,ಮಂಜುನಾಥ ಮತ್ತು ಇತರ ನಾಲ್ಕು ಹುಡಗರು ಬಂದು ಅಂಗಡಿ ಏಕೆ ಬಂದ್‌ ಮಾಡುತ್ತಿಯಾ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು, ಮೈ ಮೇಲೆ ಕೈಹಾಕಿ ನಾನು ಯಾರೂ ಗೊತ್ತಾ ಎಂದು ಹೇಳಿ ನೆಲಕ್ಕೆ ಉರುಳಿಸಿ ಆರೋಪಿಗಳ ಪೈಕಿ ಮಂಜುನಾಥ ಸುರೇಶ್‌ ದಾಸ್‌ ಅವರಿಗೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದು, ಇತರ ಎರಡು ಜನರು ಹೊಟ್ಟೆಗೆ ಗುದ್ದಿರುವುದಾಗಿ ದೂರು ನೀಡಲಾಗಿದೆ.

ಇನ್ನು ಅಂಗಡಿಯಲ್ಲಿದ್ದ ಸುರೇಶ್‌ ದಾಸ್‌ ಅವರ ಪತ್ನಿ ರಾಜೀವಿ ಗಂಡನಿಗೆ ಹೊಡೆಯುವುದನ್ನು ತಡೆಯಲು ಬಂದಾಗ ಅವರಿಗೂ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ್ದು, ಗಲಾಟೆಯನ್ನು ನೋಡಿ ಅಲ್ಲಿದ್ದ ಜನರು ಬಂದಾಗ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುವುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!