August 13, 2026

ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಹಾಶಿಮ್ ಆಮ್ಲಾ ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ

0
image_editor_output_image-1964257537-1674111119298.jpg

ಕೇಪ್ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ನ ದಿಗ್ಗಜ ಹಾಶಿಮ್ ಆಮ್ಲಾ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

2019 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತರಾದಾರೂ ಆಮ್ಲಾ ಅವರು ಸರ್ರೆ ತಂಡದೊದಿಗೆ ಇಂಗ್ಲಿಷ್ ಕೌಂಟಿಯಲ್ಲಿ ಇನ್ನೂ ಸಕ್ರಿಯರಾಗಿದ್ದರು. ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 18,000 ಕ್ಕೂ ಹೆಚ್ಚು ರನ್ ಗಳಿಸಿದ ಆಮ್ಲಾ, 2022 ರಲ್ಲಿ ಕೌಂಟಿ ಚಾಂಪಿಯನ್‌ ಶಿಪ್ ಗೆಲ್ಲುವಲ್ಲಿ ಸರ್ರೆಗೆ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಸೆಪ್ಟೆಂಬರ್ 2022 ರಲ್ಲಿ ನಾರ್ಥಾಂಪ್ಟನ್‌ ಶೈರ್ ವಿರುದ್ಧದ ಕೊನೆಯ ಶತಕದೊಂದಿಗೆ 57 ಶತಕಗಳನ್ನು ಗಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!