March 26, 2026

ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಪತ್ತೆ

0
image_editor_output_image1501938821-1674100395016.jpg

ವಿಜಯಪುರ: ಪ್ರೇಮಿಗಳಿಬ್ಬರು ನೇಣಿಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಜೈನಾಪೂರ ಗ್ರಾಮದಲ್ಲಿ ನಡೆದಿದೆ.

ರಾಕೇಶ್ ಅಂಗಡಿ (23) ಹಾಗೂ ಸಾವಿತ್ರಿ ಅಂಬಲಿ (19) ಮೃತ ಪ್ರೇಮಿಗಳು. ಜೈನಾಪೂರ ಗ್ರಾಮದ ಹೊರವಲಯದ ತೋಟವೊಂದರಲ್ಲಿ ನೇಣು ಹಾಕಿಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಕೇಶ್ ಮತ್ತು ಸಾವಿತ್ರಿ ಮಂಗಳವಾರ ಮನೆಯಿಂದ ಹೊರ ಹೋಗಿದ್ದರಂತೆ ಆ ಬಳಿಕ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!