February 3, 2026

ಲಾರಿ, ಬೊಲೆರೋ ವಾಹನದ ನಡುವೆ ಭೀಕರ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು

0
image_editor_output_image1527353315-1674018288415.jpg
ಧಾರವಾಡ: ಲಾರಿ ಹಾಗೂ ಬೊಲೆರೋ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ನವಲಗುಂದ ನರಗುಂದ ನಡುವಿನ ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಸೊಲ್ಲಾಪುರ ಮೂಲದ ರಾಜು ಹಿರೇಮಠ (21) ಹಾಗೂ ವಿಜಯ ಕಾಶೆ (23) ಎಂಬಾತರು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಸೊಲ್ಲಾಪುರ ರಾಷ್ಟೀಯ ಹೆದ್ದಾರಿ ಬೆಳವಟಗಿ ಫಾರ್ಮ್ ಹತ್ತಿರ ವೇಗವಾಗಿ ಬರುತ್ತಿದ್ದ ಟೊಮೇಟೊ ತುಂಬಿದ ಬುಲೆರೋ ವಾಹನ ಲಾರಿಗೆ ಗುದ್ದಿದೆ.

ಪರಿಣಾಮ ಬೊಲೆರೋ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನವಲಗುಂದ ಪೊಲೀಸರು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ನವಲಗುಂದ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!