February 3, 2026

ಕಾಸರಗೋಡು: ಕೋಟ್ಯಾ೦ತರ ರೂ. ಠೇವಣಿ ಪಡೆದು ವಂಚಿಸಿದ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

0
IMG-20230116-WA0042.jpg

ಕಾಸರಗೋಡು: ಬೇಡಡ್ಕ ಠಾಣಾ ಪೊಲೀಸರು ಕೋಟ್ಯಾ೦ತರ ರೂ. ಠೇವಣಿ ಪಡೆದು ವಂಚಿಸಿದ ಪ್ರಕರಣವೊಂದು ಕಾಸರಗೋಡಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟನಂತೆ ಸಂಸ್ಥೆಯ ಅಧ್ಯಕ್ಷ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಕುಂಡಂಕುಳಿ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಗ್ಲೋಬಲ್ ಬಿಸ್ ನೆಸ್ ಗ್ರೂಫ್ (ಜಿಬಿಜಿ) ನಿಧಿ ಲಿಮಿಟೆಡ್ ಸಂಸ್ಥೆಯ ಮಾಲಕ ಹಾಗೂ ಅಧ್ಯಕ್ಷ ವಿನೋದ್ ಕುಮಾರ್ (52) ಮತ್ತು ನಿರ್ದೇಶಕ ಗಂಗಾಧರ ನಾಯರ್ (66) ಬಂಧಿತರು.

ಬೆಳಿಗ್ಗೆ ಕಾಸರಗೋಡಿಗೆ ಆಗಮಿಸುತ್ತಿರುವ ಮಾಹಿತಿ ತಿಳಿದ ಪೊಲೀಸರು ಪ್ರೆಸ್ ಕ್ಲಬ್ ಪರಿಸರದಿಂದ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!