March 27, 2026

ಮಂಗಳೂರು: ಕುಕ್ಕರ್ ಸ್ಫೋಟ ಪ್ರಕರಣ:
ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಆಸ್ಪತ್ರೆಯಿಂದ ಬಿಡುಗಡೆ

0
IMG-20230114-WA0026.jpg

ಮಂಗಳೂರು: ರಾ.ಹೆ.75ರ ನಾಗುರಿ ಎಂಬಲ್ಲಿ ನ.19ರಂದು ನಡೆದ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಗೋರಿಗುಡ್ಡ ನಿವಾಸಿ ಪುರುಷೋತ್ತಮ ಪೂಜಾರಿ ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.

ನಗರದ ನಾಗುರಿ ಎಂಬಲ್ಲಿ ಚಲಿಸುತ್ತಿದ್ದ ಆಟೊ ರಿಕ್ಷಾದಲ್ಲಿ ಕುಕ್ಕರ್ ಸ್ಪೋಟಗೊಂಡಿತ್ತು. ಇದರಲ್ಲಿ ಆರೋಪಿ ಪ್ರಯಾಣಿಕ ಮುಹಮ್ಮದ್ ಶಾರೀಕ್ ಮತ್ತು ರಿಕ್ಷಾ ಚಾಲಕ ಗೋರಿಗುಡ್ಡ ನಿವಾಸಿ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು. ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು

ಮುಹಮ್ಮದ್ ಶಾರೀಕ್‌ನನ್ನು ಕೆಲವು ಸಮಯದ ಹಿಂದೆ ಎನ್‌ಐಎ ಬೆಂಗಳೂರಿಗೆ ಕರೆದೊಯ್ದಿತ್ತು. ಪುರುಷೋತ್ತಮ ಪೂಜಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಸುಮಾರು 56 ದಿನಗಳ ಬಳಿಕ ಗುಣಮುಖರಾಗಿದ್ದು, ಶನಿವಾರ ಬಿಡುಗಡೆಗೊಳಿಸಲಾಗಿದೆ. ಚಿಕಿತ್ಸೆಯ ವೆಚ್ಚವನ್ನು ಇಎಸ್‌ಐ ಹಾಗೂ ಸರಕಾರದ ಮೂಲಕ ಭರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!