ಮಿತ್ತಬೈಲ್ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾಗಿ ಮುಹಮ್ಮದ್ ಸಾಗರ್ ಪುನರಾಯ್ಕೆ
ಬಿ. ಸಿ. ರೋಡ್: ಮಿತ್ತಬೈಲ್ ಮುಹಿಯ್ಯುದ್ದೀನ್ ಜುಮಾ ಮಸೀದಿ ವಾರ್ಷಿಕ ಮಹಾಸಭೆಯು ಮುಹಮ್ಮದ್ ಅದ್ದೇಡಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಖತೀಬರಾದ ಕೆ.ವೈ ಅಶ್ರಫ್ ಫೈಝಿ ಯವರು ಉದ್ಘಾಟನೆ ನೆರವೇರಿಸಿದರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಮ್ ರವರು ಕಳೆದ ಒಂದು ವರ್ಷಗಳ ಆಯವ್ಯಯದ ಲೆಕ್ಕಪತ್ರ ವನ್ನು ಮಂಡಿಸಿ ವರದಿಯನ್ನು ಸಭೆಯಲ್ಲಿ ಅನುಮೋದನೆ ಮಾಡಲಾಯಿತು.
ಮುಂದಿನ 2021-2022 ಸಾಲಿನ ಆಡಳಿತ ಕಮಿಟಿ ಬದಲಾವಣೆ ಮಾಡದೆ ಅದನ್ನೇ ಮುಂದುವರಿಸಲು ಸಭೆಯಲ್ಲಿ ಜಮಾಅತ್ ಸದಸ್ಯರು ಸೂಚಿಸಿದರು. ಅದರಂತೆ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಸಾಗರ್ ಅಧ್ಯಕ್ಷರಾಗಿ ಪುನಃರಾಯ್ಕೆಯಾದರು.
ಜಮಾತ್ ವ್ಯಾಪ್ತಿಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯದ ಬಗ್ಗೆ ವಿವರಿಸಿ ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು
ಜಮಾತ್ ಆಡಳಿತ ಕಚೇರಿ, ಖಾಝಿಭವನ, ಮಸೀದಿ ಮೇಲಂತಸ್ತು, ಮಯ್ಯತ್ ಪರಿಪಾಲನ ಕೊಠಡಿ ಈಗಾಗಲೇ ಉದ್ಘಾಟನೆಗೊಂಡಿದ್ದು.
ಆಡಳಿತ ವ್ಯವಸ್ಥೆ ಕಂಪ್ಯೂಟರೀಕರಣ, ಜಮಾಅತ್ ಸದಸ್ಯರ ಆರ್ಥಿಕ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಸಮೀಕ್ಷೆ, ಮಹಿಳಾ ಶರೀಅತ್ ಕಾಲೇಜು ಸ್ಥಾಪನೆ, ಫೆಬ್ರವರಿ ತಿಂಗಳ ಉರೂಸ್ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯ್ತು. ನೂತನ ಅಧ್ಯಕ್ಷರು ಇದನ್ನು ಅನುಷ್ಠಾನಗೊಳಿಸಲು ಮುಂದಿನ ದಿನಗಳಲ್ಲಿ ಜಮಾಅತ್ ಆಡಳಿತ ಕಮಿಟಿ ಕಾರ್ಯಯೋಜನೆ ರೂಪಿಸಲಾಗುವುದು ಇದಕ್ಕೆ ಜಮಾಅತ್ ಸದಸ್ಯರ ಸಹಕಾರ ಕೋರಿದರು. ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಸ್ವಾಗತಿಸಿ. ಅಶ್ರಫ್ ಶಾಂತಿಅಂಗಡಿ ಧನ್ಯವಾದಗೈದರು.





