February 1, 2026

ಮೀನು ಹಿಡಿಯಲು ಹೋಗಿದ್ದವರ ಮೇಲೆ ಗುಂಡಿನ ದಾಳಿ: ಇಬ್ಬರ ಬಂಧನ

0
image_editor_output_image1916200677-1673499604557.jpg

ಹಾಸನ: ಮೀನು ಹಿಡಿಯಲು ಹೋಗಿದ್ದವರ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ನಾಗರಾಜ್ ಹಾಗೂ ಅನಿಲ್ ಎಂದು ಗುರುತಿಸಲಾಗಿದೆ. ಪೆಲ್ಲೆಟ್ ಗನ್‍ನಿಂದ ಗುಂಡಿನ ದಾಳಿ ಮಾಡಿ ಕೊಲೆ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.

ಕೊಲೆಗೆ ಕಾರಣವೇನು..?: 2022ರ ನವೆಂಬರ್ 30 ರಂದು ನವೀನ್ ಅಕ್ರಮವಾಗಿ ಮರಳು (Sand Mafia) ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಟ್ರಾಕ್ಟರ್ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದರು.

ಅದೇ ಗ್ರಾಮದ ನಾಗರಾಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅನುಮಾನಗೊಂಡ ನವೀನ್, ಪದೇ ಪದೇ ನಾಗರಾಜ್ ಜೊತೆ ಜಗಳವಾಡುತ್ತಿದ್ದ.

ಅಲ್ಲದೇ ನಾಗರಾಜ್ ವಿಶೇಷ ಚೇತನನಾಗಿದ್ದು ಇನ್ನೊಂದು ಕಾಲು ಮುರಿಯುತ್ತೇನೆ ಎಂದು ಧಮ್ಕಿ ಹಾಕಿದ್ದ. ಇದರಿಂದ ಕೆರಳಿದ ನಾಗರಾಜ್ ನವೀನ್ ಮರ್ಡರ್ ಮಾಡಲು ಸ್ಕೆಚ್ ಹಾಕಿದ್ದ.

Leave a Reply

Your email address will not be published. Required fields are marked *

error: Content is protected !!