March 19, 2026

ಬೈಂದೂರು: ನೀರಿನ ಹೊಂಡಕ್ಕೆ ಬಿದ್ದು 7 ವರ್ಷದ ಬಾಲಕ ಮೃತ್ಯು

0
IMG-20230111-WA0045.jpg

ಬೈಂದೂರು: ನೀರಿನ ಹೊಂಡಕ್ಕೆ ಬಿದ್ದು 7 ವರ್ಷದ ಮಗುವೊಂದು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮದ್ದೋಡಿ ಎಂಬಲ್ಲಿ ನಡೆದಿದೆ.

ಸುರೇಶ್ ಬಹುದೋರು ಎಂಬವರ ಮಗ ಅನಿಲ್ (7) ಮೃತಪಟ್ಟ ಬಾಲಕ.

ಮಂಗಳವಾರ ಸಂಜೆ ಸುರೇಶ್ ರವರ ಹೆಂಡತಿ ಬಟ್ಟೆ ತೊಳೆಯಲು ಮದ್ದೋಡಿ ಹೊಳೆಗೆ ಹೋಗಿದ್ದು, ಈ ಸಂದರ್ಭದಲ್ಲಿ ಅನಿಲ್ ತಾಯಿಯ ಜೊತೆ ಹೋಗಿದ್ದು ತಾಯಿ ಮಗ ಅನಿಲ್ ನನ್ನು ಹೊಳೆ ಬದಿಯಿಂದ ವಾಪಾಸು ಮನೆಗೆ ಹೋಗುವಂತೆ ಹೇಳಿ ಕಳುಹಿಸಿದ್ದು ಅನಿಲ್ ನು ಮನೆಗೆ ಹೋಗುವಾಗ ಆಟವಾಡುತ್ತಾ ಹೋಗುವ ಸಮಯ ಬಟ್ಟೆ ಒಗೆಯುವ ಸ್ಥಳದಿಂದ ಸ್ವಲ್ಪ ದೂರ ಹೊಳೆಯಲ್ಲಿ ನೀರು ಬೀಳುವ ಜಾಗದಲ್ಲಿ ಚಿಕ್ಕ ನೀರಿನ ಗುಂಡಿಗೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!