ಪುತ್ತೂರು: ಮನೆಯಿಂದ ವಿವಿಧ ಸೊತ್ತುಗಳನ್ನು ಕಳವು, ಇಬ್ಬರು ಆರೋಪಿಗಳ ಬಂಧನ
ಪುತ್ತೂರು: ಎ.ಪಿ.ಎಂ.ಸಿ ರಸ್ತೆಯ ಸೂತ್ರಬೆಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಿರುವ ವಿವೇಕಾನಂದ ಯಾನೆ ಸತ್ಯನಾರಾಯಣ ಅವರ ಮನೆಯಿಂದ ಸುಮಾರು 75 ಸಾವಿರ ಮೌಲ್ಯದ ವಿವಿಧ ಸೊತ್ತುಗಳನ್ನು ಕಳವು ಗೈದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೂರ್ನಡ್ಕ ನಿವಾಸಿಗಳಾದ ಮಹಮ್ಮದ್ ಮುಸ್ತಫ್ಪ(28) ಹಾಗೂ ಸವಣೂರು ಚಾಪಳ್ಳ ಶಮೀರ್(24) ಬಂಧಿತ ಆರೋಪಿಗಳಾಗಿದ್ದಾರೆ.
ಮನೆಯಲ್ಲಿ ಸತ್ಯನಾರಾಯಣ ಹಾಗೂ ಅವರ ಅಣ್ಣ ಗೋಪಿನಾಥ ವಾಸವಿದ್ದು, ಜನವರಿ 4 ರಂದು ಸತ್ಯ ನಾರಾಯಣ ಅವರು ತಾಯಿಯ ಅಸೌಖ್ಯತೆ ಹಿನ್ನಲೆ ತಮ್ಮ ಸ್ವಂತ ಊರಾದ ಮಧುರೈಗೆ ಹೋಗಿದ್ದರು. ಮನೆಯಲ್ಲಿದ್ದ ಗೋಪಿನಾಥ ಅವರು ಬೀಗ ಹಾಕಿ ಅವರಲ್ಲಿದ್ದ ಒಂದು ಜೊತೆ ಬೀಗದ ಕೀಯನ್ನು ಮನೆಯ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್ ನ ಬಾಕ್ಸ್ ನಲ್ಲಿಟ್ಟು, ಇನ್ನೊಂದು ಜೊತೆ ಕೀಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು.




