August 13, 2026

ಸುಬ್ರಹ್ಮಣ್ಯ: ಅನ್ಯಕೋಮಿನ ಯುವಕನಿಗೆ ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

0
image_editor_output_image-1443005733-1673236294042

ಸುಬ್ರಹ್ಮಣ್ಯ: ಒಂದು ಕೋಮಿನ ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಾಧಾಕೃಷ್ಣ (45), ವಿಶ್ವಾಸ್ ಎನ್. (19) ಎಂದು ಗುರುತಿಸಲಾಗಿದೆ.

ಸುಬ್ರಹ್ಮಣ್ಯ ಪರಿಸರದಲ್ಲಿ ಯುವತಿಯ ಜೊತೆ ತಿರುಗಾಡುತ್ತಿದ್ದ ಎಂದು ಆರೋಪಿಸಿ ಯುವಕನೋರ್ವನಿಗೆ ಇಪ್ಪತ್ತಕ್ಕೂ ಹೆಚ್ಚು ಮಂದಿಯ ತಂಡ ಮಾರಣಾಂತಿಕ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು .

ಈ ಬಗ್ಗೆ ಮಾಧ್ಯಮದವರಿಗೆ ಹೇಳಿಕೆ ನೀಡಿರುವ ಹಲ್ಲೆಗೊಳಗಾದ ಯುವಕ ಜ.5ರಂದು ಸುಬ್ರಹ್ಮಣ್ಯಕ್ಕೆ ನಾನು ಹೋಗಿದ್ದು ನನ್ನ ಪರಿಚಯದ ಯುವತಿಯನ್ನು ಕಂಡಾಗ ಅವರ ಬಳಿ ಮಾತನಾಡುತ್ತಿದ್ದೆ. ಈ ಸಂದರ್ಭ ಸುಮಾರು ಹತ್ತಕ್ಕೂ ಹೆಚ್ಚು ಮಂದಿಯ ತಂಡ ನನ್ನನ್ನು ಹಿಂದಿನಿಂದ ಬಂದು ಜೀಪಿನಲ್ಲಿ ಹಾಕಿ ಕುಮಾರಧಾರ ಬಳಿ ಕೊಂಡು ಹೋಗಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ನಾನು ಧರಿಸಿದ್ದ ಬಟ್ಟೆಯನ್ನು ಹರಿದು ನನ್ನನ್ನು ಅರೆ ನಗ್ನ ಮಾಡಿ ಹಿಂಸೆ ನೀಡಿದ್ದಾರೆ.

ಬಳಿಕ ಅವರು ನನ್ನನ್ನು ಅಲ್ಲೇ ಕಾಡಿನಲ್ಲಿ ಬಿಟ್ಟು ಹೋಗಿದ್ದು ಅಲ್ಪ ಸಮಯದ ಬಳಿಕ ಸಾವರಿಸಿಕೊಂಡು ರಸ್ತೆಗೆ ಬಂದಾಗ ಅಲ್ಲಿದ್ದ ಸಾರ್ವಜನಿಕರು ನನ್ನನ್ನು ನೋಡಿ ಸುಬ್ರಹ್ಮಣ್ಯ ಠಾಣೆಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಬಂದು ನನಗೆ ಬೇರೆ ವಸ್ತ್ರವನ್ನು ಕೊಟ್ಟು ಅಂಬುಲೆನ್ಸ್ ನಲ್ಲಿ ಸುಳ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ
ಎಂದು ಹಲ್ಲೆಗೊಳಗಾದ ಯುವಕ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಫೀದ್ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿರುವ ತಂಡದ ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!