August 13, 2026

ಸುಳ್ಯ: ಅಯ್ಯಪ್ಪ ಮಾಲಾಧಾರಿ ಬಾಲಕನನ್ನು ರಸ್ತೆ ದಾಟಿಸಿದ ಇಬ್ರಾಹೀಂ: ವೈರಲಾಯ್ತು ಫೋಟೋ

0
IMG-20230108-WA0038.jpg

ಸುಳ್ಯ: ಅಯ್ಯಪ್ಪ ಮಾಲಾಧಾರಿ ಬಾಲಕನೊಬ್ಬನನ್ನು ವೃದ್ಧರೋರ್ವರು ಕೈ ಹಿಡಿದು ರಸ್ತೆ ದಾಟಿಸಿರುವ ಘಟನೆ ಕಲ್ಲುಗುಂಡಿಯಲ್ಲಿಂದು ನಡೆದಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಯ್ಯಪ್ಪ ಮಾಲಾಧಾರಿಯಾದ ಸೋನು ಎಂಬ ಬಾಲಕ ವಾಹನ ಸಂಚಾರವಿದ್ದ ರಸ್ತೆ ದಾಟಲು ಕಷ್ಟಪಡುತ್ತಿದ್ದಾಗ ಇದನ್ನು ಗಮನಿಸಿದ ಪರಿಚಿತರಾದ ಇಬ್ರಾಹೀಂ ಮೈಲಿಕಲ್ಲು ಎಂಬವರು ಬಾಲಕನನ್ನು ಸಮೀಪದ ಹಣ್ಣಿನ ಅಂಗಡಿ ಕರೆದೊಯ್ದು ಹಣ್ಣು ನೀಡಿ ಉಪಚರಿಸಿ ರಸ್ತೆ ದಾಟಿಸಿ ಬಿಟ್ಟಿದ್ದಾರೆ.

ಇನ್ನು ಇಬ್ರಾಹೀಂ ಮೈಲಿಕಲ್ಲು ಅಯ್ಯಪ್ಪ ಮಾಲಾಧಾರಿ ಬಾಲಕನನ್ನು ರಸ್ತೆ ದಾಟಿಸಿದ ವೇಳೆ ಯಾರೋ ಕ್ಕಿಕ್ಕಿಸಿದ ಫೋಟೋವೊಂದು ‘ಸೌಹಾರ್ದ ಸಾರುವ ಚಿತ್ರ’ ಎಂಬ ಅಡಿಬರಹದೊಂದಿಗೆ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!