February 3, 2026

ವಿಟ್ಲ: ನೇಣು ಬಿಗಿದು 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

0
IMG-20230108-WA0034.jpg

ವಿಟ್ಲ: ಪುಣಚ ಗ್ರಾಮದ ಮಣಿಲ ರವೀಂದ್ರ ಗೌಡರ ಪುತ್ರ ಹೇಮಂತ್(14) ಭಾನುವಾರ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪುಣಚ ದೇವಿನಗರ ಶ್ರೀ ದೇವಿ ವಿದ್ಯಾಕೇಂದ್ರದ ಪ್ರೌಢಶಾಲೆಯಲ್ಲಿ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಮನೆ ಮಂದಿಯೆಲ್ಲಾ ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳು ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಹಳೆಯ ಲಂಗವನ್ನು ನೇಣು ಹಗ್ಗದಂತೆ ತಯಾರಿಸಿಕೊಂಡು ಗೋಡೆಗೆ ಬಡಿದಿದ್ದ ಕಬ್ಬಿಣದ ರಾಡ್ ಗೆ ಕುಣಿಕೆ ಹಾಕಿಕೊಂಡಿದ್ದಾನೆ.

ತರಗತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತ ಬೆಳಿಗ್ಗೆ ಧನು ಪೂಜೆಗೆ ಹೋಗಿ ಬಂದಿದ್ದು, ನಾಳೆ ಪರೀಕ್ಷೆ ಇರುವ ಕಾರಣ ಓದಲಿದ್ದು ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಮನೆಯಲ್ಲಿಯೇ ಉಳಿದಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!