February 4, 2026

ಬೆಳ್ತಂಗಡಿ: ಚಿರತೆ ದಾಳಿ: ದನ ಬಲಿ

0
20230106_101629.jpg

ಬೆಳ್ತಂಗಡಿ: ಚಿರತೆ ದಾಳಿಗೆ ದನವೊಂದು ಬಲಿಯಾದ ಘಟನೆ ಬೆಳ್ತಂಗಡಿ ಕುದ್ಯಾಡಿ ಗ್ರಾಮದಲ್ಲಿ ನಡೆದಿದೆ.

ಕುದ್ಯಾಡಿ ಗ್ರಾಮದ ಕೆಳಗಿನಬೆಟ್ಟು ಮನೆಯ ಶೀನ ಪೂಜಾರಿಯವರು ತಮ್ಮ‌ ದನವನ್ನು ಜ.5 ರಂದು ಬೆಳಿಗ್ಗೆ ತೋಟದಲ್ಲಿ ಮೇಯಲು ಬಿಟ್ಟಿದ್ದರು. ಆದ್ರೆ ಸುಮಾರು 11 ಗಂಟೆ ಸಮಯಕ್ಕೆ ಚಿರತೆ ದನದ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಬಳಿಕ ಮನೆಯವರು ತೋಟಕ್ಕೆ ಬಂದಾಗ ಚಿರತೆ ಮನೆಯವರನ್ನು ಅಟ್ಟಾಡಿಸಿದೆ ಎಂದು ತಿಳಿದುಬಂದಿದೆ.

ಆದ್ರೆ ಚಿರತೆ ದಾಳಿಗೆ ದನ ಬಲಿಯಾಗಿದ್ದು, ಕೂಡಲೇ ಶೀನ ಪೂಜಾರಿಯವರು ಸ್ಥಳೀಯ ಪಂಚಾಯತ್ ಸದಸ್ಯ ಶುಭಕರ್ ಹಾಗೂ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸುಲ್ಕೇರಿ ಪಂಚಾಯತ್ ಅಧ್ಯಕ್ಷ ನಾರಾಯಾಣ ಪೂಜಾರಿ, ಅಳದಂಗಡಿ ಉಪ ಅರಣ್ಯಧಿಕಾರಿ ಸುರೇಶ್ ಗೌಡ ಹಾಗೂ ಸ್ಥಳೀಯರು ಭೇಟಿ ನೀಡಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲ ಸಮಯದಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ ಭಯಬೀತರಾಗಿದ್ದಾರೆ. ಇನ್ನು ಪರಾರಿಯಾಗಿರುವ ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದು, ಬೋನ್ ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!