March 19, 2026

ಕಾರ್ಕಳ: ಅಂಡಾರು ಕರಿಯಾಲು ಕ್ರಾಸ್ ಬಳಿ ಕಾರು ಪಲ್ಟಿ: ತಪ್ಪಿದ ಅನಾಹುತ

0
IMG-20230101-WA00451.jpg

ಕಾರ್ಕಳ: ಹೆಬ್ರಿ ತಾಲೂಕಿನ ಅಂಡಾರು ಕರಿಯಾಲು ಕ್ರಾಸ್ ಬಳಿ ವೇಗವಾಗಿ ಸಾಗುತಿದ್ದ ಕಾರೊಂದು ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಅಜೆಕಾರಿನ ವ್ಯಕ್ತಿ ಯೋರ್ವರಿಗೆ ಸೇರಿದ ಕಾರಾಗಿದ್ದು ಬೆಂಗಳೂರಿನಿಂದ ಕೆರುವಾಶೆಯ ಮೂಲಕ ಅಜೆಕಾರಿಗೆ ಸಾಗುತಿದ್ದರು ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರಿನ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಇಬ್ಬರಿಗೆ ತೀವ್ರ ವಾದ ಗಾಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!