ಎಸ್‌ಯುವಿ ವಾಹನಕ್ಕೆ ಬಸ್ ಢಿಕ್ಕಿ: 9 ಮಂದಿ ಸಾವು, 15 ಮಂದಿಗೆ ಗಾಯ

ನವ್ಸಾರಿ: ಎಸ್‌ಯುವಿ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿ ಸುಮಾರು 15 ಮಂದಿ ಗಾಯಗೊಂಡ ಘಟನೆ ಗುಜರಾತ್‌ನ ನವ್ಸಾರಿ ಜಿಲ್ಲೆಯ ಹೆದ್ದಾರಿ ಬಳಿ ಶನಿವಾರ ಮುಂಜಾನೆ ನಡೆದಿದೆ.
ಬಸ್ ವಲ್ಸಾದ್ ಕಡೆಗೆ ಹೋಗುತ್ತಿದ್ದಾಗ ವೆಸ್ಮಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಖ್ಯೆ 48 ರಲ್ಲಿ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿದ್ದವರು ಸೂರತ್ ನಲ್ಲಿನ ಪ್ರಮುಖ್ ಸ್ವಾಮಿ ಮಹಾರಾಜ್ ಶತಾಬ್ದಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಾಸ್ ಆಗುತ್ತಿದ್ದರು.
ಈ ವೇಳೆ ಬಸ್ಸಿನ ಚಾಲಕನಿಗೆ ಹೃದಯಾಘಾತ ಸಂಭವಿಸಿ ಟೊಯೊಟಾ ಫಾರ್ಚುನರ್ ಕಾರಿಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದವರು ಗುಜರಾತ್ ನ ಆಂಗಲೇಶ್ವರ ಪ್ರದೇಶದ ನಿವಾಸಿಗಳಾಗಿದ್ದು, ಇವರು ಎಂಟು ಮಂದಿ ಹಾಗೂ ಬಸ್‌ನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.