February 3, 2026

ಕತಾರ್‌ನಲ್ಲಿ ಪಡುಕರೆ ನಿವಾಸಿ ಮೃತ್ಯು

0
image_editor_output_image-646309248-1672465188003.jpg

ಕೋಟ: ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಕೋಟ ಸಮೀಪ ಕೋಟ ತಟ್ಟು ಪಡುಕರೆ ನಿವಾಸಿ ಮುಹಮ್ಮದ್‌ (45) ಕತಾರ್‌ನಲ್ಲಿ ಗುರುವಾರ ಬೆಳಗ್ಗೆ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ.

ಮೃತರು ತಾಯಿ, ಪತ್ನಿಯನ್ನು ಅಗಲಿದ್ದಾರೆ. ಕತಾರ್‌ನ ಸನಯ್ಯ ಎಂಬಲ್ಲಿ 14 ವರ್ಷಗಳಿಂದ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅವರು ನಾಲ್ಕು ದಿನಗಳ ಹಿಂದೆ ಕೆಲಸ ನಿರ್ವಹಿಸುತಿದ್ದಾಗ ಕುಸಿದು ಬಿದ್ದು, ಮಿದುಳು ನಿಷ್ಕ್ರಿಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆಗೆ ಫ‌ಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಜ.2 ರಂದು ಊರಿಗೆ ಬರಲು ಸಿದ್ದತೆ ನಡೆಸುತ್ತಿದ್ದರು.

ಅವರು ಕೋಟತಟ್ಟು ಪಡುಕರೆ ಹಿದಾಯತುಲ್‌ ಇಸ್ಲಾಂ ಮದ್ರಸ ಕಾರ್ಯದರ್ಶಿಯಾಗಿ, ಕೆಸಿಎಫ್ ಕತಾರ್‌ ರಾಷ್ಟ್ರೀಯ ಸಮಿತಿಯ ಅಝೀಝಿಯಾ ಝೇನ್‌ ಸನಯ್ನಾ ಯುನಿಟ್‌ ಅಧ್ಯಕ್ಷರಾಗಿದ್ದರು

Leave a Reply

Your email address will not be published. Required fields are marked *

error: Content is protected !!