ಮಾಜಿ ಶಾಸಕ, ಜೆಡಿಎಸ್ ಮುಖಂಡನ ಕಾರು ಅಪಘಾತ
ಚಿಕ್ಕೋಡಿ(ಬೆಳಗಾವಿ): ಮಾಜಿ ಶಾಸಕ, ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಕಾರು ಅಪಘಾತ ಕ್ಕೀಡಾಗಿದೆ.
ವಿಜಯಪುರದಿಂದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮಕ್ಕೆ ಆಗಮಿಸುತ್ತಿರುವಾಗ ಬೆಳಗಾವಿಯ ಅಥಣಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ.
ಮಾಂಜರಿ ಗ್ರಾಮ ಜೆಡಿಎಸ್ ಮುಖಂಡ ಕಲ್ಲಪ್ಪ ಮಗೆಣ್ಣವರ ಸ್ವಗ್ರಾಮವಾಗಿದೆ. ಅಥಣಿಯಿಂದ ವಿಜಯಪುರದತ್ತ ಸಾಗುತ್ತಿದ್ದ ಲಾರಿ ಟೈಯರ್ ಬ್ಲಾಸ್ಟ್ ಆಗಿ ಕಾರಿನ ಮೇಲೆ ಟೈಯರ್ ಬಿದ್ದ ಪರಿಣಾಮ ಮಗೆಣ್ಣವರ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ.





