December 16, 2025

ಮಂಗಳೂರು: ದ.ಕ .ಪತ್ರಕರ್ತರ ಜಿಲ್ಲಾ ಸಮ್ಮೇಳನ -2023: ಆಮಂತ್ರಣ ಪತ್ರ ಬಿಡುಗಡೆ

0
IMG-20221230-WA0045.jpg

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(ರಿ)ದ ಜಿಲ್ಲಾ ಸಮ್ಮೇಳನ -2023 ಜ.3ರಂದು ಮಂಗಳವಾರ ಬೆಳಗ್ಗೆ 9:30ರಿಂದ ನಗರದಕುದ್ಮುಲ್ ರಂಗರಾವ್ ಪುರಭವನದಲ್ಲಿ ಎಂಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕರಾದ ಪ್ರಕಾಶ್ ಶೆಟ್ಟಿಉದ್ಘಾಟಿಸಲಿದ್ದಾರೆ.

ಸಮ್ಮೇಳನದ ಅಧ್ಯಕ್ಷತೆಯನ್ನು ರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಶ್ರೀ ಸದಾಶಿವ ಶೆಣೈ ವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬೀಚ್ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಯನ್ನು ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಇಲಾಖೆ ಸಚಿವರು, ಕರ್ನಾಟಕ ಸರಕಾರ ಇವರು ನೆರವೇರಿ ಸಲಿದ್ದಾರೆ.ಪತ್ರಕರ್ತರ ಸಂಚಯನ ನಿಧಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ.

ಪರಿಸರ ಸ್ನೇಹಿ ಯೋಜನೆಗೆ ಎಸ್ ಸಿಡಿಸಿಸಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಚಾಲನೆ ನೀಡಲಿದ್ದಾರೆ.ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರ ‘ಭಾವ ಚಿತ್ರ ಯಾನ -2’ ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಬಿಡುಗಡೆ ಗೊಳಿಸಲಿದ್ದಾರೆ.

ಪತ್ರಕರ್ತ ವಿಕ್ರಂ ಕಾಂತಿಕೆರೆಯವರ ಕೃತಿ ‘ಕಾವೇರಿ ತೀರದ ಪಯಣ’ ಕೃತಿ ಯನ್ನುಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಿಡುಗಡೆ ಗೊಳಿಸ ಲಿದ್ದಾರೆ. ದ.ಕ ಜಿಲ್ಲಾ ಪತ್ರ ಕರ್ತರ ಸಂಘದ ವಿಶೇಷ ಸಂಚಿಕೆಯನ್ನುಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ನೋಂ)ದ ಅಧ್ಶಕ್ಷ ಶಿವಾನಂದ ತಗಡೂರು ನೆರವೇರಿ ಸಲಿದ್ದಾರೆ.

ಜಿಲ್ಲಾ ಸಮ್ಮೇಳನದ ಕಿಟ್ ವಿತರಣೆಯನ್ನು ಶಾಸಕ ವೇದವ್ಯಾಸ್ ಕಾಮತ್ ನೆರವೇರಿಸಲಿದ್ದಾರೆ. ಹಸಿರು ಉಸಿರು ಯೋಜನೆ ಯ – ಹಣ್ಣಿನ ಗಿಡಗಳ ವಿತರಣೆಯನ್ನು ಶಾಸಕ ಡಾ. ಭರತ್ ಶೆಟ್ಟಿ ನೆರವೇರಿಸಲಿದ್ದಾರೆ. ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯನ್ನು ಶಾಸಕ ಯು. ಟಿ .ಖಾದರ್ ನೆರವೇರಿಸಲಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ವಾಚನಾಲಯಕ್ಕೆ ಪುಸ್ತಕ ಹಸ್ತಾಂತರವನ್ನು ಶಾಸಕ ಡಾ.ಮಂಜು ನಾಥ ಭಂಡಾರಿ ಮಾಡಲಿದ್ದಾರೆ. ಬಿಜೈ- ಕಾಪಿಕಾಡ್ ಅಂಗನವಾಡಿ ಮಕ್ಕಳಿಗೆ ಕ್ರೀಡಾ ಪರಿಕರಗಳನ್ನು ಶಾಸಕ ಹರೀಶ್ ಪೂಂಜಾ ಹಸ್ತಾಂತರಿಸಲಿದ್ದಾರೆ. ಸಮ್ಮೇಳನದಸಾಂಸ್ಕೃತಿಕ ಕಾರ್ಯಕ್ರಮವನ್ನು ಪಟ್ಲ ಪೌಂಡೇಶನ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿನೆರ ವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ್ರತಾಪ್ ಸಿಂಹ ನಾಯಕ್, ಸದಸ್ಯರು ವಿಧಾನ ಪರಿಷತ್ ಜಯಾನಂದ ಅಂಚನ್ ,ಮೇಯರ್ ಮಂಗಳೂರು ಮಹಾನಗರ ಪಾಲಿಕೆ, ಪೂರ್ಣಿಮಾ,ಉಪ ಮೇಯರ್ ಮಂಗಳೂರು ಮಹಾನಗರ ಪಾಲಿಕೆ ಬಿ.ವಿ.ಮಲ್ಲಿಕಾರ್ಜುನಯ್ಯ ಅಧ್ಯಕ್ಷರು, ಐಎಫ್ ಡಬ್ಲ್ಯೂ ಜೆ ಹೊಸದಿಲ್ಲಿ ಪ್ರೊ.ಪಿ.ಎಸ್. ಯಡಪಡಿತ್ತಾಯ, ಉಪ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು
ಯೋಗೀಶ್ ಆಚಾರ್ಯ, ಚೀಪ್ ಜನರಲ್ ಮ್ಯಾನೇಜರ್, ಕೆನರಾ ಬ್ಯಾಂಕ್ ಸುಚರಿತ ಶೆಟ್ಟಿ, ಅಧ್ಯಕ್ಷರು , ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ,ನಿಯಮಿತ.ಪುಷ್ಪ ರಾಜ್ ಜೈನ್ಅಧ್ಯಕ್ಷರು ಕ್ರೆಡೈ ಮಂಗಳೂರು. ಗಿರೀಶ್, ಉಪಾಧ್ಯಕ್ಷರು,ಓಶಿಯನ್ ಪರ್ಲ್, ಮಂಗಳೂರು, ಗಾಯತ್ರಿ .ಆರ್,ಪ್ರಾದೇಶಿಕ ಮುಖ್ಯಸ್ಥರು, ಬ್ಯಾಂಕ್ ಆಫ್ ಬರೋಡಾ ಸಾಂಬ ಶಿವರಾವ್ ಆಡಳಿತ ನಿರ್ದೇಶಕರು ಅನಘ ರಿಫೈನರೀಸ್ ಇವರು ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!