ಬಂಟ್ವಾಳ: ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಡಿ.31ರಂದು ಶಾಲಾ ವಾರ್ಷಿಕೋತ್ಸವ

ಬಂಟ್ವಾಳ: ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಡಿಸೆಂಬರ್ 31ರಂದು ಶನಿವಾರ ಶಾಲಾ ವಾರ್ಷಿಕೋತ್ಸವ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಶಾಲಾ ಅಭಿವೃದ್ಧಿ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಲಿದೆ.
ಡಿ.31ರಂದು ಬೆಳ್ಳಗ್ಗೆ ಸಭಾ ಕಾರ್ಯಕ್ರಮ, ಅಮೃತ ಸಿಂಚನ ಶಾಲಾ ಸಂಚಿಕೆ ಅನಾವರಣ, ಬಹುಮಾನ ವಿತರಣೆ ನದೆಯಲಿದೆ.
ಇನ್ನು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ವಿಶೇಷವಾಗಿ ‘ನರಕಾಸುರ ವಧೆ’ ಯಕ್ಷಗಾನ ನಡೆಯಲಿದೆ.