ಪಿಎಫ್ಐ ಪರ ಕೆಲಸ: ಕೇರಳ ಹೈಕೋರ್ಟ್ ವಕೀಲ ಅರೆಸ್ಟ್
ಎರ್ನಾಕುಲಂ: ಕೇರಳದಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಕೀಲನೊಬ್ಬನನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾದ ಹದಿನಾಲ್ಕನೇ ವ್ಯಕ್ತಿ ಎರ್ನಾಕುಲಂ ಜಿಲ್ಲೆಯ ಎಡವನಕ್ಕಾಡ್ ನಿವಾಸಿ ಮೊಹಮ್ಮದ್ ಮುಬಾರಕ್ ಎಂದು ಗುರುತಿಸಲಾಗಿದೆ.
ಮುಬಾರಕ್ ಪಿಎಫ್ಐ ಮಾರ್ಷಲ್ ಆರ್ಟ್ಸ್ ಮತ್ತು ಹಿಟ್ ಸ್ಕ್ವಾಡ್ ಟ್ರೈನರ್ ಆಗಿದ್ದು ಕೇರಳ ಹೈಕೋರ್ಟ್‌ನಲ್ಲಿ ವಕೀಲನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ತಪಾಸಣೆಯ ವೇಳೆ ಆತನ ಮನೆಯಿಂದ ಬ್ಯಾಡ್ಮಿಂಟನ್ ರಾಕೆಟ್ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಕೊಡಲಿ, ಕತ್ತಿಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಕೇರಳದಲ್ಲಿ ಪಿಎಫ್‌ಐ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ ಎನ್‌ಐಎ12 ಜಿಲ್ಲೆಗಳ 56 ಸ್ಥಳಗಳಲ್ಲಿ ಏಳು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಪಿಎಫ್‌ಐನ ಹಲವು ವಲಯ ಮುಖ್ಯಸ್ಥರ ನಿವಾಸಗಳಲ್ಲಿ ಶೋಧ ನಡೆಸಿತ್ತು.