ರಿಷಭ್ ಪಂತ್ ಗೆ ಸಹಾಯ ಮಾಡುವ ಬದಲು ಕಾರಿನಲ್ಲಿದ್ದ ಬ್ಯಾಗ್‌ನಿಂದ ಹಣವನ್ನು ಕದ್ದು ಪರಾರಿ

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್ ಬ್ಯಾಟರ್ ರಿಷಭ್ ಪಂತ್ ಅವರು ಇಂದು ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಪಂತ್ ಹಣೆ, ಕಾಲು, ಬೆನ್ನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅಪಾಯದಿಂದ ಪಾರಾಗಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಪಂತ್ ಕಾರು ಚಾಲನೆ ಮಾಡುವಾಗ ಮಣ್ಣಿನ ರಾಶಿಗೆ ಡಿಕ್ಕಿ ಹೊಡೆದು ಉರುಳಿದೆ. ಕಾರು ರಸ್ತೆಯಿಂದ ಆಚೆಗೆ ಪಲ್ಟಿಯಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ರೈಲಿಂಗ್ ಗಳಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ರಿಷಬ್ ಪಂತ್ ತಮ್ಮ ಕಾರಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಅವರ ಗಾಯಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಸಮೀಪದಲ್ಲೇ ಇದ್ದ ಕೆಲವರು ಉರಿಯುತ್ತಿದ್ದ ಕಾರಿನ ಬಳಿಗೆ ಬಂದರು. ಅವರು ಕ್ರಿಕೆಟಿಗನಿಗೆ ಸಹಾಯ ಮಾಡುವ ಬದಲು ಕಾರಿನಲ್ಲಿದ್ದ ಬ್ಯಾಗ್‌ನಿಂದ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.