ಪ್ರವಾದಿಯವರ ಬಗ್ಗೆ ಫೇಸ್ಬುಕ್ಕಿನಲ್ಲಿ ಅವಹೇಳನಕಾರಿ ಬರಹ:
ಆರೋಪಿಯನ್ನು ಶೀಘ್ರ ಬಂಧಿಸುವಂತೆ ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು
ಸುಳ್ಯ: ಕಳೆದ ಹತ್ತು ದಿನಗಳ ಹಿಂದೆ ಪೈಗಂಬರ್ ಮಹಮ್ಮದ್ ರವರ ಬಗ್ಗೆ ಸುಳ್ಯ ಐವರ್ನಾಡು ಗ್ರಾಮದ ವ್ಯಕ್ತಿಯೊಬ್ಬ ತನ್ನ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಪದವನ್ನು ಬರೆದು ನಿಂದಿಸಿದ ಘಟನೆ ವರದಿಯಾಗಿ ಚರ್ಚೆಗೆ ಗ್ರಾಸವಾಗಿದ್ದವು.
ಘಟನೆಯ ನಂತರ ಸುಳ್ಯದ ವಿವಿಧ ಸಂಘಟನೆಗಳು, ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಸಂಬಂಧಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡಲಾಗಿತ್ತು. ಆದರೆ ದೂರು ನೀಡಿ ವಾರಗಳೇ ಕಳೆದರೂ ಆರೋಪಿಯನ್ನು ಬಂದಿಸಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಖಂಡಿಸಿ ಸುಳ್ಯ ಮುಸ್ಲಿಂ ಒಕ್ಕೂಟದ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಅದರಂತೆ ಇಂದು ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟದ ವತಿಯಿಂದ ಹತ್ತಕ್ಕೂ ಹೆಚ್ಚು ಮುಖಂಡರು ಸಂಚಾಲಕ ಇಕ್ಬಾಲ್ ಎಲಿಮಲೆ ರವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಮುಸಲ್ಮಾನ ಬಾಂಧವರು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪೈಗಂಬರ್ ಮಹಮ್ಮದ್ ರವರ ಬಗ್ಗೆ ಅವಹೇಳನಾಕಾರಿ ಸಂದೇಶವನ್ನು ಬರೆದು ನಿಂದಿಸಿರುವ ಸುಳ್ಯ ಐವರ್ನಾಡು ಮೂಲದ ವ್ಯಕ್ತಿಯನ್ನು ಶೀಘ್ರ ಬಂಧಿಸಿ, ಕಾನೂನು ಕ್ರಮ ಜರುಗಿಸಿ, ಸಮಾಜದಲ್ಲಿ ಕೋಮು ಭಾವನೆಗೆ ದಕ್ಕೆ ಉಂಟುಮಾಡಿ ಸೌಹಾರ್ದತೆಯನ್ನು ಕೆಡಿಸಲು ಮುಂದಾಗಿರುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ದೂರು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಸಮಿತಿಯ ಸಹಸಂಚಾಲಕ ಕೆ ಎಸ್ ಉಮ್ಮರ್, ಆರ್ ಕೆ ಮಹಮ್ಮದ್, ಸದಸ್ಯರುಗಳಾದ ಹಾಜಿ ಮುಸ್ತಫಾ ಜನತಾ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ರಶೀದ್ ಜಟ್ಟಿಪಳ್ಳ, ರಫೀಕ್ ಪಡು,ಹಸೈನಾರ್ ಎ ಕೆ ಕಲ್ಲುಗುಂಡಿ ಉಪಸ್ಥಿತರಿದ್ದರು.
ದೂರು ಸ್ವೀಕರಿಸಿರುವ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆದಿರುವ ಘಟನೆಯನ್ನು ದೊಡ್ಡ ಅಪರಾಧವೆಂದು ಪರಿಗಣಿಸಲಾಗುವುದು.ಸಾಮಾಜಿಕ ಜಾಲತಾಣ ಮತ್ತು ಫೇಸ್ಬುಕ್ ಖಾತೆಗಳಿಂದ ಆಗಿರುವುದರಿಂದ ಇದನ್ನು ಕುಲಂಕುಶವಾಗಿ ತನಿಖೆ ಮಾಡಬೇಕಾಗುತ್ತದೆ. ಸೈಬರ್ ವಿಭಾಗದಲ್ಲಿ ಇದರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಬೇಕಾದ ಅವಶ್ಯಕತೆ ಗಳಿದ್ದು ಶೀಘ್ರದಲ್ಲಿ ತಪ್ಪಿತಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ಯನ್ನು ನೀಡಿರುತ್ತಾರೆ ಎಂದು ಸಂಚಾಲಕ ಇಕ್ಬಾಲ್ ಎಲಿಮಲೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.





