ಕಾಪು | ಕಾರು ಢಿಕ್ಕಿ: ಬಸ್ ಮಾಲಕ ಮೃತ್ಯು

ಕಾಪು: ಕಾರು ಢಿಕ್ಕಿಯಾಗಿ ಬಸ್ ಮಾಲಕ ಮೃತಪಟ್ಟ ಘಟನೆ ಕಾಪು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಾಪು ಮಹಾವೀರ್ ಬಸ್‌ನ ಮಾಲಕ, ಜೈನ ಬಸದಿ ಮನೆಯ ಮಹೇಂದ್ರ ಕುಮಾರ್ ಇಂದ್ರ (60) ಮೃತಪಟ್ಟವರು.
ಮೃತರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮಂಗಳವಾರ ರಾತ್ರಿ ಸುಮಾರು 7 ಗಂಟೆ ವೇಳೆಗೆ ತಮ್ಮ ಮನೆಗೆ ಹೋಗಲು ಕಾಪು ಪೆಟ್ರೋಲ್ ಬಂಕ್ ಬಳಿ ನಿಂತಿದ್ದಾಗ ಉಡುಪಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಕಾರು ಅವರಿಗೆ ಢಿಕ್ಕಿ ಹೊಡೆದಿದೆ.
ಮನೆ ಸಮೀಪದಲ್ಲೇ ಈ ಅಪಘಾತ ಸಂಭವಿಸಿದ್ದು, ಯಾರಿಗೂ ಅಪಘಾತ ಸಂಭವಿಸಿದೆ ಎಂದು ಅವರ ಸಹೋದರ ಜೀವಂಧರ್ ಅವರು ಹೆದ್ದಾರಿ ಬದಿಗೆ ಬಂದು ನೋಡಿದಾಗ ತಮ್ಮನೇ ಅಪಘಾತದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವ ವಿಷಯ ತಿಳಿಯಿತು.