ಕಾಸರಗೋಡು: ಅಕ್ರಮವಾಗಿ ಕೋವಿ, ಮದ್ದುಗುಂಡು ಸಾಗಾಟ: ಇಬ್ಬರ ಬಂಧನ

ಕಾಸರಗೋಡು: ಅಕ್ರಮ ಕೋವಿ ಮತ್ತು ಮದ್ದು ಗುಂಡು ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉದುಮ ಎರೋಲ್ ನ ನಿಖಿಲ್(22) ಮತ್ತು ರಾಜೇಶ್(33) ಎಂದು ಗುರುತಿಸಲಾಗಿದೆ.
ಆರೋಪಿಗಳು ಸಂಚರಿಸುತ್ತಿದ್ದ ಪಿಕಪ್ ವ್ಯಾನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಂಬಳೆ ಆರಿಕ್ಕಾಡಿ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದಾರಿಯಾಗಿ ಬಂದ ಪಿಕಪ್ ವ್ಯಾನ್ ಅನ್ನು ತಪಾಸಣೆ ನಡೆಸಿದಾಗ ಸೀಟಿ ನಡಿಯಲ್ಲಿ ಅಕ್ರಮ ಕೋವಿ ಮತ್ತು ಏಳು ಸಜೀವ ಗುಂಡುಗಳು ಪತ್ತೆಯಾಗಿದೆ. ಬೇಟೆಗಾರಿಕೆಗೆ ತೆರಳಿದ್ದರು ಎಂಬ ಶಂಕಿಸಲಾಗಿದೆ.
ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.