February 4, 2026

ಬಂಟ್ವಾಳ: ಅಯ್ಯಪ್ಪ ವೃತದಾರಿಗೆ ಜೀವ ಬೆದರಿಕೆ ಪ್ರಕರಣ: ಓರ್ವ ಆರೋಪಿ ಪೊಲೀಸ್ ವಶಕ್ಕೆ

0
IMG-20221228-WA0023.jpg

ಬಂಟ್ವಾಳ: ಬಂಟ್ವಾಳದಲ್ಲಿ ಪಾರ್ಸೆಲ್‌ ನೀಡಲು ಬಂದಿದ್ದಅಯ್ಯಪ್ಪ ವೃತದಾರಿಗೆ ಜೀವ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೀನು ವ್ಯಾಪಾರಿ ಇಕ್ಬಾಲ್ ಬಂಧಿತ ಆರೋಪಿ.

ಡಿಸೆಂಬರ್ 27ರಂದು ಸಂಜೆ 4.30ಕ್ಕೆ ಪಾರ್ಸೆಲ್ ನೀಡಲೆಂದು ಸ್ನೇಹಿತನೊಂದಿಗೆ ಬಂಟ್ವಾಳದ ಬಿ ಮೂಡ ಗ್ರಾಮದ ಗೂಡಿನಬಳಿ ಎಂಬಲ್ಲಿಗೆ ಪಾರ್ಸೆಲ್ ವಾಹನದಲ್ಲಿ ಬಂದಿದ್ದ ಅಯ್ಯಪ್ಪ ವೃತದಾರಿಯಿದ್ದ ವಾಹನವನ್ನು ಆಕ್ಟೀವಾ ಸ್ಕೂಟರ್‌ನಲ್ಲಿ ಬಂದ ಈತ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಒಡ್ಡಿದ್ದು,

ಇದು ನಮ್ಮ ಏರಿಯಾವಾಗಿದ್ದು, ಇಲ್ಲಿ ಹಿಂದೂಗಳು ಬರಬಾರದು ಎಂದೆಲ್ಲಾ ಬೆದರಿಕೆ ಹಾಕಿದ್ದಲ್ಲದೆ, ಧರ್ಮ ಮತ್ತು ದೇವರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದ ಎಂದು ಅಯ್ಯಪ್ಪ ವೃತದಾರಿ ದೂರು ನೀಡಿದ್ದರು. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!