ಪ್ರೀತಿಸಿದವಳಿಗಾಗಿ ಅಣ್ಣನ ಮನೆಯಲ್ಲೇ ಕಳ್ಳತನ: ಗೋವಾದಲ್ಲಿ ಮೋಜು-ಮಸ್ತಿ, ಆರೋಪಿಯ ಬಂಧನ
ಬೆಂಗಳೂರು: ಪ್ರೀತಿಸಿದವಳಿಗಾಗಿ ಅಣ್ಣನ ಮನೆಯಲ್ಲೇ ಕಳ್ಳತನ ಮಾಡಿ ಬಳಿಕ ಗೋವಾದಲ್ಲಿ ಮಸ್ತಿ ಮಾಡಿದವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೊಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದ್ದು, ಈತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಆಡುಗೋಡಿಯ ಮಹಾಲಿಂಗೇಶ್ವರ ಬಂಡೆ ಏರಿಯಾದಲ್ಲಿ ವಾಸವಿದ್ದ ಇರ್ಫಾನ್, ತಾನು ಪ್ರೀತಿಸಿದವಳ ಆಸೆ ಈಡೇರಿಸುವ ಸಲುವಾಗಿ ಅನ್ನವಿತ್ತು, ಆಶ್ರಯ ಕೊಟ್ಟ ಅಣ್ಣನ ಮನೆಯಲ್ಲೇ ತನ್ನ ಕೈಚಳಕ ತೋರಿಸಿದ್ದಾನೆ. ಪ್ರಿಯತಮೆಯ ಗೋವಾ ಆಸೆಗೆ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದಾನೆ.





