July 9, 2026

ಐಷಾರಾಮಿ ಕಾರುಗಳ ಕಳವು, ಮಾರಾಟ: ಇಬ್ಬರು ಆರೋಪಿಗಳ ಬಂಧನ

0
image_editor_output_image1686169931-1672124621289.jpg

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐಷಾರಾಮಿ ಕಾರುಗಳ ಕಳವು ಮತ್ತು ಮಾರಾಟ ಮಾಡಿಸುವುದಾಗಿ ನಂಬಿಸಿ ಕಾರು ಕೊಂಡೊಯ್ದು ಹಣ ನೀಡದೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳು ಕಬ್ಬನ್‌ ಪಾರ್ಕ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿ.ಹಳ್ಳಿ ನಿವಾಸಿ ಸೈಯದ್‌ ಜಿಬ್ರಾನ್‌ (28) ಮತ್ತು ತೆಲಂಗಾಣದ ಹೈದರಾಬಾದ್‌ನ ಪರ್ವತಮ್‌ ಹೇಮ್‌ಚಂದ್ರ (42) ಬಂಧಿತರು.

ಇಬ್ಬರು ಆರೋಪಿಗಳಿಂದ 8.92 ಕೋಟಿ ರೂ. ಮೌಲ್ಯದ ಮರ್ಸಿ ಡಿಸ್‌ ಬೆಂಜ್‌, ರೇಂಜ್‌ ರೋವರ್‌, ಮಹೀಂದ್ರ ತಾರ್‌, ಆಡಿ ಕ್ಯೂ ಸೇರಿ ವಿವಿಧ ಕಂಪನಿಯ 12 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!