July 8, 2026

ಬೆಳ್ತಂಗಡಿ: ಮೊಬೈಲ್‌ ಸಿಮ್ ಕಾರ್ಡ್ ತರುವುದಾಗಿ ಹೇಳಿ ಹೋದ ಮಹಿಳೆ ನಾಪತ್ತೆ

0
image_editor_output_image-1315089662-1672117261085.jpg

ಬೆಳ್ತಂಗಡಿ: ಮೊಬೈಲ್‌ ಸಿಮ್‌ ಕಾರ್ಡ್‌ ತರುವುದಾಗಿ ಹೇಳಿ ಹೋದ ಮಹಿಳೆ ವಾಪಾಸ್‌ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.

ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಬಂಗಟ ಮನೆ ನಿವಾಸಿ ಜೋನ್ ಮೋನಿಸ್ ರವರ ಪತ್ನಿ ಪ್ರಿಯಾ ಟಿ.ಎಂ (37ವ) ರವರು ಡಿ.22ರಂದು ಮಧ್ಯಾಹ್ನ ಸುಮಾರು 2.00 ಗಂಟೆಗೆ ಮನೆಯಿಂದ ಮಡಂತ್ಯಾರಿಗೆ ಹೋಗಿ ಮೊಬೈಲ್ ಸಿಮ್ ಕಾರ್ಡ್ ತರುವುದಾಗಿ ಹೇಳಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ.

ಅವರ ಬಳಿ ಇದ್ದ ಎರಡು ಮೊಬೈಲ್ ನಂಬರ್‌ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದುದರಿಂದ ಅವರ ಪತಿ ಜೋನ್ ಮೋನಿಸ್ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!