ತನ್ನ ಮಗಳ ಅಶ್ಲೀಲ ವೀಡಿಯೋ ಪ್ರಸಾರ ಮಾಡಿದ್ದನ್ನು ವಿರೋಧಿಸಿದ್ದ ಯೋಧನ ಹತ್ಯೆ

ಗಾಂಧಿನಗರ: ತನ್ನ ಮಗಳ ಅಶ್ಲೀಲ ವೀಡಿಯೋವನ್ನು ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು ಥಳಿಸಿ ಕೊಂದಿರುವ ಘಟನೆ ಗುಜರಾತ್‌ನ ನಾಡಿಯಾಡ್‌ನಲ್ಲಿ ನಡೆದಿದೆ.
ಚಕ್ಲಾಸಿ ಗ್ರಾಮದಲ್ಲಿ 15 ವರ್ಷದ ಹುಡುಗ ಬಾಲಕಿಯ ಅಶ್ಲೀಲ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ. ಇದಕ್ಕೆ ಬಾಲಕಿಯ ತಂದೆ ಯೋಧ ಮೆಲ್ಜಿಭಾಯಿ ವಘೇಲಾ ಶನಿವಾರ ಬಾಲಕನ ಮನೆಗೆ ತೆರಳಿ ಹುಡುಗನ ನಡೆಯನ್ನು ಖಂಡಿಸಿದ್ದಾರೆ.
ಈ ವೇಳೆ ಹುಡುಗನ ಮನೆಯವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.